ಅನಿಲ್ ಕುಂಬ್ಳೆ 10 ವಿಕೆಟ್‌ ಸಾಧನೆಗೆ 25 ವರ್ಷ

ಅನಿಲ್ ಕುಂಬ್ಳೆ 10 ವಿಕೆಟ್‌ ಸಾಧನೆಗೆ 25 ವರ್ಷ

ಬೆಂಗಳೂರು: ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಅವರ ಅದ್ಭುತ ಲೆಗ್ ಸ್ಪಿನ್ ಬಾಲರ್. 7 ಫೆಬ್ರವರಿ 1999 ರಂದು, ಕುಂಬ್ಳೆ ಏಕಾಂಗಿಯಾಗಿ ಪಾಕಿಸ್ತಾನ ವಿರುದ್ಧ ಇವರ ಬೌಲಿಂಗ್ ಧಾಟಿಗೆ ವಿಶ್ವವೇ ಸಲಾಂ ಎಂದಿದೆ. 1999 ರಲ್ಲಿ, ಪಾಕಿಸ್ತಾನ ವಿರುದ್ಧ ದೆಹಲಿ ಟೆಸ್ಟ್ ಪಂದ್ಯದಲ್ಲಿ, ಅನಿಲ್ ಕುಂಬ್ಳೆ ಅವರು ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿ ವಿಶ್ವದಾಖಲೆ ಮಾಡಿದರು. ಆ ಸಮಯದಲ್ಲಿ ಅವರು ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡರು.

1999 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 252 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಪಾಕಿಸ್ತಾನ್ ತಂಡವು ಕೇವಲ 172 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಪರ ಕುಂಬ್ಳೆ 4 ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ 3 ವಿಕೆಟ್ ಕಬಳಿಸಿ ಮಿಂಚಿದರು

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 339 ರನ್​ ಕಲೆಹಾಕಿತು.

ಮೊದಲ ಇನಿಂಗ್ಸ್​ನ 80 ರನ್​ಗಳ ಹಿನ್ನಡೆಯೊಂದಿಗೆ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 420 ರನ್​ಗಳ ಗುರಿ ಪಡೆಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕ್ ತಂಡಕ್ಕೆ ಸಯೀದ್ ಅನ್ವರ್ (69) ಹಾಗೂ ಶಾಹಿದ್ ಅಫ್ರಿದಿ (41) ಉತ್ತಮ ಆರಂಭ ಒದಗಿಸಿದ್ದರು.

ಆದರೆ 25ನೇ ಓವರ್​ನ 2ನೇ ಮತ್ತು 3ನೇ ಎಸೆತಗಳಲ್ಲಿ ಅಫ್ರಿದಿ ಹಾಗೂ ಇಜಾಝ್ ಅಹ್ಮದ್ (0) ರನ್ನು ಔಟ್ ಮಾಡುವಲ್ಲಿ ಕುಂಬ್ಳೆ ಯಶಸ್ವಿಯಾದರು. ಇದಾದ ಬಳಿಕ ಕುಂಬ್ಳೆ ಹಿಂತಿರುಗಿ ನೋಡಲಿಲ್ಲ ಎನ್ನಬಹುದು.

ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಾ ಸಾಗಿದ ಅನಿಲ್ ಕುಂಬ್ಳೆ ಪಾಕ್ ತಂಡವನ್ನು 207 ರನ್​ಗಳಿಗೆ ಆಲೌಟ್ ಮಾಡಿದರು. ಈ ಪಂದ್ಯದಲ್ಲಿ 26.3 ಎಸೆತಗಳನ್ನು ಎಸೆದ ಕುಂಬ್ಳೆ 74 ರನ್ ನೀಡಿ 10 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದರು. ಅನಿಲ್ ಕುಂಬ್ಳೆ ಈ ಐತಿಹಾಸಿಕ ದಾಖಲೆ ನಿರ್ಮಿಸಿ ಇಂದಿಗೆ (ಫೆಬ್ರವರಿ 7) 25 ವರ್ಷಗಳು ಪೂರ್ಣವಾಗಿವೆ.

 

 

ಫ್ರೆಶ್ ನ್ಯೂಸ್

Latest Posts

Featured Videos