ಅನಂತವನ ಉದ್ಯಾನವನದ ಕಲಿಕಾ ಕೇಂದ್ರಕ್ಕೆ ಅನಿಲ್ ಕುಮಾರ್‌ ಭೇಟಿ

ಅನಂತವನ ಉದ್ಯಾನವನದ ಕಲಿಕಾ ಕೇಂದ್ರಕ್ಕೆ ಅನಿಲ್ ಕುಮಾರ್‌ ಭೇಟಿ

ಬೊಮ್ಮನಹಳ್ಳಿ, ಸೆ. 18: ಹೆಚ್‌ಎಸ್‌ಆರ್ ಬಡಾವಣೆಯ “ಅನಂತವನ”  ಉದ್ಯಾನವನದಲ್ಲಿ “ಕಲಿಕಾ ಕೇಂದ್ರ”ಕ್ಕೆ ಇಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್‌ರವರು ಭೇಟಿ ನೀಡಿದರು. ಉದ್ಯಾನವನದಲ್ಲಿ ವಿನೂತನ ರೀತಿಯಲ್ಲಿ ಬೆಳೆಯಲಾಗುತ್ತಿರುವ ಸಸ್ಯಗಳು, ರಸಗೊಬ್ಬರ ತಯಾರಿಕಾ ಘಟಕ, ಕಸವನ್ನು ಉಪಯುಕ್ತ ವಸ್ತುಗಳನ್ನಾಗಿ ಮಾಡಿರುವ ವಿಭಿನ್ನ ರೀತಿಯನ್ನು ಕಂಡು ಸಂತಸವನ್ನು ವ್ಯಕ್ತಪಡಿಸಿದರು.

ವ್ಯರ್ಥ ಪದಾರ್ಥಗಳು ಹಾಗೂ ವಸ್ತುಗಳನ್ನು ವಿಭಿನ್ನ ರೀತಿಯಲ್ಲಿ ಬಳಕೆ ಮಾಡಿರುವುದು, ಕಸದಿಂದ ತಯಾರಾದ ಗೊಬ್ಬರದಿಂದ ತಾಜಾ ತರಕಾರಿ, ಹಣ್ಣುಗಳ ಬೆಳೆ ಕಂಡು ಮಂತ್ರಮುಗ್ಧರಾದರು. ಈ ಕೇಂದ್ರವನ್ನು ನಡೆಸುತ್ತಿರುವ ಸಿಎಂಸಿ ಸಂಸ್ಥೆಯ ಮುಖ್ಯಸ್ಥರಾದ ಡಾ. ಶಾಂತಿ ಮತ್ತು ಅವರ ಸಂಸ್ಥೆಯ ಸದಸ್ಯರನ್ನು ಅಭಿನಂದಿಸಿದರು.

ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಹಲವಾರು ಸ್ಥಳಗಳಲ್ಲಿ ಇಂತಹ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲು ಬಿಬಿಎಂಪಿ ಪ್ರಯತ್ನಿಸುತ್ತದೆ ಎಂದರು. ಇಂತಹ ಕಲಿಕಾ ಕೇಂದ್ರದಿಂದ ಗೃಹಿಣಿಯರು ತರಬೇತಿ ಹೊಂದಿದರೆ, ಮನೆಯಲ್ಲಿಯೇ ಗಾರ್ಡನ್ ಮತ್ತು ಕೌಶಲ್ಯಯುತವಾಗಿ ವ್ಯರ್ಥ ಪದಾರ್ಥಗಳನ್ನು ಉಪಯೋಗಿಸಬಹುದೆಂದು ಡಾ. ಶಾಂತಿ ತಿಳಿಸಿದರು.

ಈಗಾಗಲೇ ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವಾರು ಮಹಾನಗರ ಪಾಲಿಕೆ, ನಗರಸಭೆ ಅಧಿಕಾರಿಗಳು ನಮ್ಮ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಿ ಅವರ ರಾಜ್ಯಗಳಲ್ಲಿಯೂ ಇದೇ ಮಾದರಿಯ ಕೇಂದ್ರ ಏರ್ಪಡಿಸಲು ಚಿಂತನ ನಡೆಸಿದ್ದಾರೆಂದು, ಇದು ಮಾದರಿ ಕಲಿಕಾ ಕೇಂದ್ರವಾಗಿದೆ ಎಂದು ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತೆ ಡಾ. ಸೌಜನ್ಯಾ ರವರು ತಿಳಿಸಿದರು.

ಅನಂತವನ ಉದ್ಯಾನವನದಲ್ಲಿ ಕಲಿಕಾ ಕೇಂದ್ರಕ್ಕೆ ಇಂದು ಬಿಬಿಎಂಪಿ ಆಯುಕ್ತ ಅನಿಲ್

 

ಫ್ರೆಶ್ ನ್ಯೂಸ್

Latest Posts

Featured Videos