ದನದ ಕೊಟ್ಟಿಗೆಯಾದ ಅಂಗನವಾಡಿ

ದನದ ಕೊಟ್ಟಿಗೆಯಾದ ಅಂಗನವಾಡಿ

ಗೌರಿಬಿದನೂರು: ಕಟ್ಟಡ ದುರಸ್ಥಿಗೆ ಮುಂದಾಗದ ಇಲಾಖೆ, ಬಾಡಿಗೆ ಕಟ್ಟಡದಲ್ಲಿ ಕಲಿಕೆ
ತಾಲ್ಲೂಕಿನ ಕುರೂಡಿ ಗ್ರಾಪಣ ವ್ಯಾಪ್ತಿಯ ಕದರನಹಳ್ಳಿ ಅಂಗನವಾಡಿ ಕಟ್ಟಡ ಶಿಥಲಾವಸ್ಥೆಗೆ ತಲುಪಿ ನಾಲ್ಕೈದು ವರ್ಷ ಕಳೆದಿದ್ದು,ಪ್ರಸ್ತುತ ದನಗಳ ಕೊಟ್ಟಿಯಾಗಿ ಪರಿವರ್ತನೆಗೊಂಡಿದೆ.
ಸಂಬಂಧಪಟ್ಟ ಇಲಾಖೆ ಈ ಗ್ರಾ.ಪಂ ಅಗಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಗಳು ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ಹೆಚ್ಚಿನ ಅಸಕ್ತಿ ತೋರಿ ಅವುಗಳ ಸಮಗ್ರ ಕಲ್ಯಾಣಕ್ಕೆ ಮುಂದಾಗಿದೆ. ಅಂಗನವಾಡಿ ಕೇಂದ್ರಗಳನ್ನು ವಿನೂತನವಾಗಿ ಮಾರ್ಪಾಡಿಸಿ ಮಕ್ಕಳಲ್ಲಿ ಶಾಲೆಗೆ ಬರಲು ಏನಲ್ಲಾ ಪ್ರಯತ್ನಗಳು ಮಾಡುತ್ತಿವೆ.
ನರೇಗಾ ಯೋಜನೆಯಲ್ಲಿ ಹಣ ಮೀಸಲಿಟ್ಟು ಕಟ್ಟಡ ಅಭಿವೃದ್ದಿಗೆ ಹೆಚ್ಚಿನ ಅನುಧಾನ ಸಹ ಬಿಡುಗಡೆ ಮಾಡಿವೆ. ಆದರೆ ಇಲ್ಲಿನ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಶಿಥಿಲಾವಸ್ಥೆಗೆ ತಲುಪಿದ್ದು ಈ ಬಗದ್ಗೆ ಕಿಂಚತ್ತೂ ಕಾಳಜಿ ಇಲ್ಲದೆ. ಉದ್ದೇಶ ಪೂರ್ವಕವಾಗಿ ಬಾಡಿಗೆ ಕಟ್ಟಡಕ್ಕೆ ವರ್ಗಾವಣೆ ಮಾಡಿ ಹಣ ಮಾಡುವ ದಂಧೆಗೆ ಮುಂದಾಗಿದೆ. ಶಿಥಿಲವಾಸ್ಥೆಯಾಗಿರುವ ಕಟ್ಟಡಕ್ಕೆ ರೀಪೇರಿ ನೆಪದಲ್ಲಿ ಹಣ ಬಿಡುಗಡೆ ಮಾಡಿ ಗುಳಂ ಮಾಡಲು ಮುಂದಾಗಿದ್ದಾರೆ ಇಲ್ಲಿನ ಅಭಿಯಂತರರು ಹಾಗೂ ಅಧಿಕಾರಿಗಳು ಎಂದು ಸ್ಥಳೀಯರು ಅರೋಪಿಸಿದ್ದಾರೆ.
ಕದರನಹಳ್ಳಿ ಗ್ರಾಮದಲ್ಲಿ 782 ಕುಟುಂಬಗಳಿದ್ದು ಈ ಗ್ರಾಮದಲ್ಲಿ 23 ಚಿಣ್ಣರು ಅಂಗನವಾಡಿ ಕೇಂದ್ರ ಬರುತ್ತಿದ್ದಾರೆ.ಅವರಿಗಾಗಿ ಸುಸಜ್ಜಿತವಾದ ಶಾಲೆಯಿಲ್ಲ ಎಂಬ ಕೊರುಗು ನಮ್ಮ ಗ್ರಾಮಕ್ಕೆ ಇದೆ ಎಂದು ಗ್ರಾಮದ ನಿವಾಸಿ ಭರತ್ ವಿಷಾಧ ವ್ಯಕ್ತಪಡಿಸಿದ್ದಾರೆ.
ದುರಸ್ತಿ ಅಗಿಲ್ಲ ಕಟ್ಟಡ

ಫ್ರೆಶ್ ನ್ಯೂಸ್

Latest Posts

Featured Videos