ಮದ್ದೂರು ತಾಲ್ಲೂಕು ಅಂಗನವಾಡಿ ನೌಕರರ 6ನೇ ಸಮ್ಮೇಳನ

ಮದ್ದೂರು ತಾಲ್ಲೂಕು ಅಂಗನವಾಡಿ ನೌಕರರ 6ನೇ ಸಮ್ಮೇಳನ

ಮದ್ದೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS ) ಖಾಸಗೀಕರಣ ಹಾಗೂ ನೇರ ಹಣ ವರ್ಗಾವಣೆ ಧೋರಣೆಯ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ  ಮದ್ದೂರು ತಾಲ್ಲೂಕು ಅಂಗನವಾಡಿ ನೌಕರರ 6 ನೇ ಸಮ್ಮೇಳನ ನಡೆಯಿತು.

ಇಂದು ನಗರದ ಮದ್ದೂರು ಟೌನ್ ನ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ ಕಾಯರ್ಯಕ್ರಮವನ್ನು ಅಂಗನವಾಡಿ ನೌಕರರ ಸಂಘಟನೆ (ಸಿಐಟಿಯು) ರಾಜ್ಯ ಖಜಾಂಚಿ ಕಮಲಾ ಅವರು ಸಮ್ಮೇಳನ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಸೇವಾ ಭದ್ರತೆ, ಕನಿಷ್ಟ ಕೂಲಿ ನಿಗಧಿ,  ನಿವೃತ್ತಿ ನಂತರ ಪೆನ್ಸನ್  ನೀಡುಬೇಕು. ಐಸಿಡಿಎಸ್ ನಲ್ಲಿ ಪ್ಯಾಕೇಜ್ ಆಹಾರ ಮತ್ತು ನೇರ ಮತ್ತು ಷರತ್ತುಬದ್ಧ ನಗದು ವರ್ಗಾವಣೆಯ ಕ್ರಮಗಳನ್ನು ಈ ಕೂಡಲೇ ನಿಲ್ಲಿಸಬೇಕು. ಐಸಿಡಿಎಸ್ ಸೇವೆಗೆ ಆಧಾರ ಕಾರ್ಡ ಜೋಡಣೆಯನ್ನು ಕಡ್ಡಾಯ ಮಾಡಬಾರದು. ಐಸಿಡಿಎಸ್‍ನ್ನು ಯಾವುದೇ ಸ್ವರೂಪದಲ್ಲಿಯೂ ಖಾಸಗಿಕರಿಸಬಾರದು.  ಐಸಿಡಿಎಸ್‍ನ್ನು ಸಾರ್ವತ್ರಿಕರಣಗೊಳಿಸಿ ಮತ್ತು ಸಾಂಸ್ಥೀಕರಣ ಮಾಬೇಕು. ಬಜೆಟ್ ಕಡಿತ ಹಿಂಪಡೆಯಿರಿ. ಈ ಯೋಜನೆಯ ಬಲವರ್ಧನೆಗೆ ಕೇಂದ್ರ ಸರ್ಕಾರ ತನ್ನ ಬಜೆಟ್ಟಿನಲ್ಲಿ ಸಾಕಷ್ಟು ಹಣಕಾಸನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.

45 ಮತ್ತು 46ನೇ ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ (ಐ.ಎಲ್.ಸಿ)ದ ಶಿಫಾರಸ್ಸು ಜಾರಿ ಮಾಡಿ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಿಬೇಕು. ಅವರಿಗೆ ತಿಂಗಳಿಗೆ 18,000 ರೂ. ಗೆ ಕಡಿಮೆಯಿಲ್ಲದಂತೆ ಕನಿಷ್ಟ ಕೂಲಿ ಜಾರಿ ಮಾಡಿ, ತಿಂಗಳಿಗೆ 3000 ರೂ. ಗೆ ಕಡಿಮೆ ಇಲ್ಲದ ಸರ್ಕಾರಿ ಭದ್ರತೆಯ ಪಿಂಚಣಿಯನ್ನು ನೀಡಿ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡರಾದ ಜಿ.ರಾಮಕೃಷ್ಣ, ಸಿ.ಕುಮಾರಿ,ಮಂಜುಳಾ ರಾಜ್, ರಾಜು, ರಾಮು ಸೇರಿದಂತೆ ಅಂಗನವಾಡಿ ನೌಕರರ ಸಂಘಟನೆಯ ತಾಲ್ಲೂಕು ಪಧಾದಿಕಾರಿಗಳು  ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos