ಆನೆ ಪುಟ್ಬಾಲ್ ಆಡುವುದು ನೋಡಿ ಜನ ಫುಲ್ ಫಿದಾ..!

ಮಡಿಕೇರಿ, ಅ. 23 : ಆನೆಯ ಮೇಲೆ ಮಾವುತ ಕುಳಿತುಕೊಂಡು ಕಾಲಿನಿಂದ ಪುಟ್ಬಾಲ್ನ್ನು ಮತ್ತೊಂದು ಆನೆಯ ಕಡೆಗೆ ಒದೆಯುವಂತೆ ನಿರ್ದೇಶಿಸುತ್ತಾನೆ. ಮಾವುತನ ನಿರ್ದೇಶನದಂತೆ ಆನೆಗಳು ಪುಟ್ಬಾಲ್ ಆಡುವ ವಿಡಿಯೋ ಒಂದು ಈಗ ವೈರಲ್ ದ ಘಟನೆ ಕೊಡುಗು ಜಿಲ್ಲೆಯಲ್ಲಿ ನಡೆದಿದೆ.
ಮುದ್ದಾದ ಆನೆಗಳ ಪುಟ್ಬಾಲ್ ಆಟದ ವೀಡಿಯೊ ಕೂಡ ಅಷ್ಟೇ ಮುದ್ದಾಗಿದೆ ಎಂದು ಅನೇಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆನೆಗಳು ಮೈಸೂರಿನ ದಸರಾ ಹಬ್ಬದ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಇವರನ್ನು ಇತ್ತೀಚೆಗಷ್ಟೆ ಕೊಡುಗು ಜಿಲ್ಲೆಯ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೇ ಆನೆಗಳಿಗೆ ಆಟವಾಡಲು ತರಬೇತಿ ನೀಡಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos