ಆಂಧ್ರ ಪ್ರದೇಶಕ್ಕೆ ಪ್ರವಾಸೋದ್ಯಮ ಪ್ರಶಸ್ತಿ

ಆಂಧ್ರ ಪ್ರದೇಶಕ್ಕೆ ಪ್ರವಾಸೋದ್ಯಮ ಪ್ರಶಸ್ತಿ

ನವದೆಹಲಿ, ಸೆ. 28 : ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆ 2017-18ರ ರಾಷ್ಟ್ರೀಯ ಪ್ರವಾಸೋದ್ಯಮ ಪುರಸ್ಕಾರ ಆಂಧ್ರ ಪ್ರದೇಶ ಪಡೆದುಕೊಂಡಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಿದರು. ಪ್ರವಾಸೋದ್ಯಮದಲ್ಲಿ ಹಿಂದೊಮ್ಮೆ ಕಪ್ಪು ಪಟ್ಟಿಗೆ ಸೇರಿದ್ದ ಭಾರತ ಈಗ ಕೆಂಪು ಹಾಸು ಹಾಸಿ ಪ್ರವಾಸಿಗರಸ್ವಾಗತಿಸುತ್ತಿದೆ ಎಂದಿದ್ದಾರೆ. ಅಲ್ಲದೆ, ಪ್ರವಾಸೋದ್ಯಮದಲ್ಲಿ ತೊಡಗಿಸಿ ಕೊಂಡಿ ರುವವರು ಪರಿಸರ ಕಾಳಜಿ ರೂಢಿಸಿಕೊಳ್ಳ ಬೇಕು. ಜವಾಬ್ದಾರಿಯುತ, ಸುಸ್ಥಿರ ಪ್ರವಾ ಸೋದ್ಯಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳ ಬೇಕು ಎಂದು ಕರೆ ನೀಡಿದ್ದಾರೆ.
ಒಟ್ಟು 76 ಪ್ರಶಸ್ತಿ ನೀಡಲಾಗಿದ್ದು, ವಿವಿಧ ವಿಭಾಗಗಳಲ್ಲಿ ಹಲವು ರಾಜ್ಯಗಳು, ಸಂಸ್ಥೆ ಗಳನ್ನು ಪುರಸ್ಕರಿಸಲಾಗಿದೆ. ಗೋವಾ ಮತ್ತು ಮಧ್ಯಪ್ರದೇಶ ಸಾಹಸ ಪ್ರವಾ ಸೋದ್ಯಮ ವಿಭಾಗದಲ್ಲಿ ಜಂಟಿ ವಿಜೇತ ರಾಗಿವೆ. ಉತ್ತಮ ಸಿನೆಮಾ ಪ್ರಚಾರ ಸ್ನೇಹಿ ರಾಜ್ಯ ವಿಭಾಗದಲ್ಲಿ ಉತ್ತರಾಖಂಡ ಮೊದಲ ಸ್ಥಾನ ಪಡೆದಿದೆ. ಮಾಹಿತಿ ತಂತ್ರಜ್ಞಾನ ಬಳಕೆ ಯಲ್ಲಿ ತೆಲಂಗಾಣ ಮೊದಲ ಸ್ಥಾನ ದಲ್ಲಿದ್ದರೆ, ಐಟಿಡಿಸಿಯ ದಿ ಅಶೋಕ್ ಹೊಟೇಲ್ “ಉತ್ತಮ ಹೊಟೇಲ್’ ಪುರಸ್ಕಾರ ಪಡೆದಿದೆ.

ಸಂಕಷ್ಟಕ್ಕೆ ಸಿಲುಕಿದೆ ಪ್ರವಾಸಿಗರಿಗೆ ನೆರವು ನೀಡುವ ವ್ಯಕ್ತಿಗಳಿಗೆ ಮುಂದಿನ ವರ್ಷದಿಂದ ವಿಶೇಷ ಪ್ರಶಸ್ತಿ ನೀಡುವುದಾಗಿ ಪ್ರವಾ ಸೋದ್ಯಮ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್ ಘೋಷಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos