ಆಂಧ್ರ ಸ್ಟೈಲ್ ಪೆಸರಟ್ಟು

ಆಂಧ್ರ ಸ್ಟೈಲ್ ಪೆಸರಟ್ಟು

 

ಬೆಂಗಳೂರು, ಸೆ. 12: ನಮ್ಮ ದಿನ ನಿತ್ಯದ ಜೀವನದಲ್ಲಿ ಹಲವಾರು ರೀತಿಯ ಆಹಾರಗಳನ್ನ ನಾವು ತಿಂದಿರುತ್ತೇವೆ. ಹೌದು,  ಆಂಧ್ರ ಪ್ರದೇಶದಲ್ಲಿ ಮಾಡುವ ಹಲವಾರು ತಿನಿಸುಗಳಲ್ಲಿ ಪೆಸರಟ್ಟು ಕೂಡ ಒಂದು. ಇದೊಂದು ದೋಸೆಯ ವಿಧವಾಗಿದ್ದು, ತುಂಬಾನೇ ಟೇಸ್ಟಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು : ಹೆಸರು ಕಾಳು- 2 ಕಪ್, ಅಕ್ಕಿ- 1/2 ಕಪ್, ಈರುಳ್ಳಿ- ಹೆಚ್ಚಿದ 1 , ಶುಂಠಿ- 1 ತುಂಡು, ಜೀರಿಗೆ- 1 1/2 ಟೀಚಮಚ, ಹಸಿಮೆಣಸಿನ ಕಾಯಿ- 5, ಉಪ್ಪು- ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ :

ಹೆಸರುಕಾಳು ಮತ್ತು ಅಕ್ಕಿಯನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

ನಂತರ ಅದಕ್ಕೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಜೀರಿಗೆ ಕಾಳು ಸೇರಿಸಿ ಕಲಸಿ.

ದೋಸೆ ಹಿಟ್ಟನ್ನು ಸಮವಾಗಿ ಹೆಂಚಿನ ಮೇಲೆ ಹಾಕಿ ಎಣ್ಣೆ ಹಾಕಿ. ದೋಸೆ ಸ್ವಲ್ಪ ಬೆಂದ ನಂತರ ಈರುಳ್ಳಿ, ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪು ಅದರ ಮೇಲೆ ಉದುರಿಸಿ. ದೋಸೆಯನ್ನು ಎರಡು ಕಡೆ ಚೆನ್ನಾಗಿ ಬೇಯಿಸಿ. ಈಗ ರುಚಿಯಾದ ಪೆಸರಟ್ಟು ಸವಿಯಲು ರೆಡಿ.

 

ಫ್ರೆಶ್ ನ್ಯೂಸ್

Latest Posts

Featured Videos