ಅತ್ಯಾಚಾರಿ ಆರೋಪಿ ಅಂದರ್

ಅತ್ಯಾಚಾರಿ ಆರೋಪಿ ಅಂದರ್

ಧಾರವಾಡ, ಸೆ. 24: ಸತತವಾಗಿ 3 ವರ್ಷಗಳಿಂದ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ 60 ವರ್ಷದ  ಆರೋಪಿಯು ಅಂದರ್ ಆಗಿದ್ದಾನೆ. ಹೌದು, ಧಾರವಾಡ ಜಿಲ್ಲೆಯ ಹಿರೇಮಲ್ಲಿಗವಾಡ ಗ್ರಾಮದಲ್ಲಿ 19 ವರ್ಷದ ಯುವತಿಯ ಮೇಲೆ 60 ವರ್ಷದ ವ್ಯಕ್ತಿ ನಿರಂತರ ಅತ್ಯಾಚಾರ ಎಸಗಿದ್ದಾನೆ.

ತಾನು ವಾಸವಿದ್ದ ಗ್ರಾಮದ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.ಇದರಿಂದ ಗರ್ಭಿಣಿಯಾಗಿದ್ದ ಯುವತಿ 2018 ರಲ್ಲಿ ಮಗುವಿಗೆ ಜನ್ಮ ನೀಡಿದ್ದು, ತನ್ನ ಕೃತ್ಯ ಬಯಲಾಗುತ್ತದೆ ಎಂಬ ಕಾರಣಕ್ಕೆ ಆರೋಪಿ ಸಂತ್ರಸ್ತೆಯ ತಾಯಿಯ ಮನೆಯಲ್ಲೇ ಹೆರಿಗೆ ಮಾಡಿಸಿದ್ದಾನೆ. ಯುವತಿಗೆ ಜನಿಸಿದ ಮಗುವನ್ನು ರಸ್ತೆ ಬಳಿ ಇಟ್ಟು ಬಂದಿದ್ದಾನೆ. ಈ ವಿಚಾರ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಯುವತಿ ಹಾಗೂ ಆಕೆಯ ತಾಯಿಗೆ ಬೆದರಿಸಿದ್ದಾನೆ.

ರಸ್ತೆ ಬಳಿ ಮಗುವನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 3 ವರ್ಷದ ಹಿಂದೆ ಅದೇ ಜಾಗದಲ್ಲಿ ಮಗು ಸಿಕ್ಕಿದ್ದರಿಂದ ಮಫ್ತಿಯಲ್ಲಿ ಪೊಲೀಸರು ಗ್ರಾಮಕ್ಕೆ ತೆರಳಿ ಹಲವು ದಿನಗಳ ಕಾಲ ವಿಚಾರಣೆ, ತನಿಖೆ ಕೈಗೊಂಡಿದ್ದು, ನಂತರದಲ್ಲಿ ರಹಸ್ಯ ಬಯಲಾಗಿದೆ.

ಈ ವಿಚಾರಣೆಗಾಗಿ ಮಹಿಳಾ ಪೊಲೀಸರು ಕೆಲಸ ಮಾಡುವವರ ವೇಷದಲ್ಲಿ ಹಳ್ಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಇದೆಲ್ಲಾ ಸಂಗತಿ ಬೆಳಕಿಗೆ ಬಂದಿದೆ. 3 ವರ್ಷದ ಹಿಂದೆ ದೊರೆತ ಮಗುವನ್ನು ಬಾಲಮಂದಿರದಲ್ಲಿ ಬಿಡಲಾಗಿದೆ. 2 ಮಕ್ಕಳ ರಕ್ತವನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos