ಅಮ್ಮಾ ಅಮ್ಮಾ ನಂಗೇ ನೀನು ಬೇಕಮ್ಮಾ

ಅಮ್ಮಾ ಅಮ್ಮಾ ನಂಗೇ ನೀನು ಬೇಕಮ್ಮಾ

ಬೆಳಗಾವಿ, ಏ. 8 : ಅಮ್ಮ ಅಮ್ಮ ನಂಗೇ ನೀನು ಬೇಕಮ್ಮಾ ಎಂದು ಕಂದಮ್ಮ ಕಣ್ಣೀರಿಟ್ಟ ದೃಶ್ಯ ಮನ ಕಲಕುವಂತಹದು.
ವೈದ್ಯಕೀಯ ಸಿಬ್ಬಂದಿಗಳು ಕೊರೊನಾದಿಂದಾಗಿ ತಮ್ಮ ಮನೆಯವರನ್ನು ನೆನೆದು ಮನದಲ್ಲೇ ಕೊರಗುತ್ತಾ, ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ. ಮನೆಯಲ್ಲಿ ತಮ್ಮ ಮುದ್ದು ಮಕ್ಕಳ ಜೊತೆ ಮುದ್ದಾಡುತ್ತಾ ಇರಬೇಕು ಎಂದು ಬಯಸುವ ಸಿಬ್ಬಂದಿಗಳಿಗೆ, ಮಹಾಮಾರಿಯಿಂದಾಗಿ ಆಸ್ಪತ್ರೆಯಲ್ಲೇ ಇರಬೇಕಾದ ಅನಿವಾರ್ಯತೆ. ಮನೆಯಲ್ಲೇ ಇರುವ ಚಿಕ್ಕ ಕಂದಮ್ಮಗಳು ಅಮ್ಮನನ್ನು ನೆನೆದು “ಅಮ್ಮಾ ಅಮ್ಮಾ ನಂಗೇ ನೀನು ಬೇಕಮ್ಮಾ, ಮನೆಗೆ ಹೋಗೋಣ ಅಮ್ಮಾ, ಬಾರಮ್ಮ”, ಎಂದು ಅಮ್ಮನನ್ನು ಬಿಟ್ಟಿರಲಾಗದ ಕಂದಮ್ಮವೊಂದು ಅಮ್ಮನನ್ನು ಕರೆದು ಕಣ್ಣೀರು ಸುರಿಸುವಂತದ್ದು ಎಂತವರನ್ನು ಕಣ್ಣೀರಾಗಿಸುತ್ತದೆ. ಇಂತಹ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಇಂತಹ ಕಣ್ಣಿಗೆ ಕಾಣದ ಅದೆಷ್ಟೋ ಅದೃಶ್ಯ ದೃಶ್ಯಗಳು ಈ ಕೊರೊನಾದ ಹಿಂದೆ ಕಣ್ಣೀರ ಕತೆಗಳಾಗಿ ಉಳಿದಿವೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ತಾಯಿಗೆ ಮನೆಗೆ ಬಾ ಅಮ್ಮಾ ಎಂದು ಮಗುವೊಂದು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಗೋಗರೆದ ವಿಡಿಯೋ ಇದೀಗ ವೈರಲ್ ಆಗಿದೆ. ಆಸ್ಪತ್ರೆ ಬಾಗಿಲಲ್ಲಿ ನಿಂತಿರುವ ತಾಯಿಯನ್ನು ನೋಡಿ ಮಗು ಕೈ ಬೀಸಿ ಕರೆಯುತ್ತಿದ್ದರೆ, ದೂರದಲ್ಲಿ ನಿಂತಿದ್ದ ತಾಯಿ ಹೃದಯ ಕಣ್ಣೀರಿಡುತ್ತಿತ್ತು. ಈ ಮನಕಲುಕುವ ದೃಶ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನೆರೆದವರ ಕಣ್ಣನ್ನೂ ಒದ್ದೆ ಮಾಡಿಸಿತು.

ಐಸೋಲೇಷನ್ ವಾರ್ಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಟಾಫ್ ನರ್ಸ್ ಸುಗಂಧಾ ಕೋರಿಕೊಪ್ಪ ಹಾಗೂ ಮೂರು ವರ್ಷದ ಮಗು ಐಶ್ವರ್ಯಾ ಅವರ ಕಥೆಯಿದು. ನಾಲ್ಕು ದಿನಗಳ ಬಳಿಕ ತಾಯಿ-ಮಗು ಮುಖಾಮುಖಿಯಾಗಿದ್ದಾರೆ. ಆ ಕ್ಷಣದಲ್ಲಿ ದೂರದಿಂದಲೇ ಒಬ್ಬರಿಗೊಬ್ಬರು ಮುಖ ನೋಡಿ ಬಿಕ್ಕಿ ಬಿಕ್ಕಿ ಕಣ್ಣೀರಾದರು. ‘ಅಮ್ಮಾ ನೀ ಬಾ…’ ಎಂದು ಹಠ ಮಾಡಿ ಮಗು ಕಣ್ಣೀರಿಟ್ಟಿತು.

ಫ್ರೆಶ್ ನ್ಯೂಸ್

Latest Posts

Featured Videos