ಅಮೆರಿಕ ಹುಡುಗಿ ಜತೆಗೆ ಪ್ರಭಾಸ್ ಮದುವೆ?

ಅಮೆರಿಕ ಹುಡುಗಿ ಜತೆಗೆ ಪ್ರಭಾಸ್ ಮದುವೆ?

ಆ. 3: ಟಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಗಳಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮೊದಲ ಸಾಲಿನಲ್ಲಿದ್ದಾರೆ. ಬಾಹುಬಲಿ ಸಿನಿಮಾ ಮೂಲಕ ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರು ಸಂಪಾದಿಸಿದ ಅವರು ಆಗಸ್ಟ್ 30ರಂದು ‘ಸಾಹೋ’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೀಗ ಅವರ ಮದುವೆಗೆ ಸಂಬಂಧಿಸಿದ ಸುದ್ದಿಯೊಂದು : ಟಾಲಿವುಡ್ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಪ್ರಭಾಸ್ ಮದುವೆಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅಮೆರಿಕದಲ್ಲಿ ನೆಲೆ ನಿಂತಿರುವ ತೆಲುಗು ಕುಟುಂಬ ಮೂಲದ ಹುಡುಗಿಯನ್ನು ಪ್ರಭಾಸ್ ವರಿಸಲಿದ್ದಾರೆ ಎನ್ನಲಾಗಿದೆ. ಸಾಹೋ ಸಿನಿಮಾ ರಿಲೀಸ್ ಬಳಿಕ ಮದುವೆ ನಡೆಯಲಿದೆಯಂತೆ. ಈಗಾಗಲೆ ಮದುವೆ ಮಾತುಕತೆ ಮುಗಿದಿದೆಯಂತೆ. ಆದರೆ ಇದುವರೆಗೂ ಅವರ ಕುಟುಂಬದ ಕಡೆಯಿಂದಾಗಲಿ, ಪಿಆರ್ ಕಡೆಯಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಈ ಬಗ್ಗೆ ಬಂದಿಲ್ಲ. ಸದ್ಯಕ್ಕೆ ಮದುವೆ ಸಂಗತಿ ಮಾತ್ರ ಟಾಲಿವುಡ್ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos