ಅಮೆರಿಕದಿಂದ ಹೊಸ ವೀಸಾ ನಿಯಮ

ಅಮೆರಿಕದಿಂದ ಹೊಸ ವೀಸಾ ನಿಯಮ

ವಾಷಿಂಗ್ಟನ್‌ , ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ವಿದೇಶಿಯರು ಅಮೆರಿಕದಲ್ಲಿ ನೆಲೆಸಲು ನೀಡಲಾಗುವ ಗ್ರೀನ್​ಕಾರ್ಡ್ ಪದ್ಧತಿ ಬದಲು ‘ಬಿಲ್ಡ್ ಅಮೆರಿಕ’ ಎಂಬ ಹೊಸ ವೀಸಾ ಯೋಜನೆ ಆರಂಭಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಕುಟುಂಬ ಆಧಾರಿತ ವಲಸೆ ನೀತಿಯ ಬದಲಿಗೆ, ಉದ್ಯೋಗಿಯ ಪ್ರತಿಭೆ, ವೃತ್ತಿ ಕೌಶಲ್ಯ ಹೊಂದಿರುವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.  ಹೊಸ ನೀತಿಯಿಂದ  ಅಮೆರಿಕದ ವೀಸಾ ಕೋಟಾವನ್ನು ಶೇ.12 ರಿಂದ ಶೇ.57ಕ್ಕೆ ಏರಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.  ವೈಟ್​ಹೌಸ್​ ಅಧಿಕಾರಿಗಳ ಪ್ರಕಾರ ಹೊಸ ವಲಸೆ ನೀತಿಗೆ 6 ಪ್ರಮುಖ ಗುರಿಗಳಿವೆ. ಗಡಿ ಭದ್ರಪಡಿಸುವುದು, ಮಾನವೀಯ ಮೌಲ್ಯಗಳ ರಕ್ಷಣೆ, ಕುಟುಂಬಗಳ ಏಕೀಕರಣ, ಅಮೆರಿಕದ ಉದ್ಯೋಗಿಗಳ ವೇತನದ ರಕ್ಷಣೆ, ಕೌಶಲ್ಯವಿರೋ ವೃತ್ತಿಪರ ವಲಸಿಗರನ್ನು ಆಕರ್ಷಿಸುವುದು, ನಿರ್ಣಾಯಕ ಉದ್ದಿಮೆಗಳಿಗೆ ಉದ್ಯೋಗಿಗಳ ಪೂರೈಕೆಯಂತಹ ಗುರಿಗಳನ್ನು ಹೊಂದಿದೆ ಎಂದರು

ಫ್ರೆಶ್ ನ್ಯೂಸ್

Latest Posts

Featured Videos