ಆಂಬುಲೆನ್ಸ್ಗೆ ಇಬ್ಬರು ಬಲಿ

ಆಂಬುಲೆನ್ಸ್ಗೆ ಇಬ್ಬರು ಬಲಿ

ಬೆಂಗಳೂರು, ಜ  9 : ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವ ಅವಸರದಲ್ಲಿ ಖಾಸಗಿ ಆಸ್ಪತ್ರೆ ಆಂಬುಲೆನ್ಸ್ ವಿವೇಕನಗರ ಸಮೀಪದ ಶ್ರೀನಿವಾಗಿಲು ಜಂಕ್ಷನ್ನಲ್ಲಿ ಒನ್ವೇನಲ್ಲಿ ಸಾಗಿ ಎದುರಿಗೆ ಬಂದ ಬೈಕ್ಗೆ ಗುದ್ದಿದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿದ್ದಾರೆ.
ಮುರುಗೇಶಪಾಳ್ಯ ನಿವಾಸಿಗಳಾದ ಮೊಹಮ್ಮದ್ ಮನ್ಸೂರ್ (28) ಹಾಗೂ ಮೈಸೂರಿನ ಇಬ್ರಾಹಿಂ ಖಲೀಲ್ (29) ಮೃತ ಸವಾರರು. ಆಂಬುಲೆನ್ಸ್ ಚಾಲಕ ಅಭಿಷೇಕ್ನನ್ನು ಬಂಧಿಸಿರುವುದಾಗಿ ಅಶೋಕನಗರ ಪೊಲೀಸರು ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ರೋಗಿಯನ್ನು ಜ.7ರ ಸಂಜೆ ಅಭಿಷೇಕ್, ವೈದ್ಯರ ಸಲಹೆ ಮೇರೆಗೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಕರೆದೊಯ್ಯುತ್ತಿದ್ದ.
ಬೈಕ್ನಲ್ಲಿ ಕೆಲಸ ಮುಗಿಸಿಕೊಂಡು ಮನ್ಸೂರ್ ಮತ್ತು ಖಲೀಲ್ ಶ್ರೀನಿವಾಗಿಲು ಜಂಕ್ಷನ್ನಿಂದ ದೊಮ್ಮಲೂರು ಕಡೆಗೆ ಸಾಗುತ್ತಿದ್ದರು. ಏರ್ವ್ಯೂ ಜಂಕ್ಷನ್ನಿಂದ ಅತಿವೇಗವಾಗಿ ಒನ್ವೇನಲ್ಲಿ ಬಂದ ಆಂಬುಲೆನ್ಸ್, ಬೈಕ್ಗೆ ಗುದ್ದಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರನ್ನು ಸ್ಥಳೀಯರು ಆಸ್ಪತ್ರೆ ಸೇರಿಸಿದ್ದರು. ಆಂಬುಲೆನ್ಸ್ನಲ್ಲಿದ್ದ ರೋಗಿಯನ್ನು ಸಹ ಆಸ್ಪತ್ರೆಗೆ ತಲುಪಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಚಿಕಿತ್ಸೆ ಫಲಿಸದೆ ಗಾಯಾಳುಗಳು ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತರು ಸುಲ್ತಾನ್ ಜ್ಯುವೆಲ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಅತಿವೇಗವಾಗಿ ಅಂಬುಲೆನ್ಸ್ ಸಾಗಿರುವುದು ಘಟನೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos