ಅಂಬಿ ಹುಟ್ಟುಹಬ್ಬಕ್ಕೆ:ಅಮರ್

ಅಂಬಿ ಹುಟ್ಟುಹಬ್ಬಕ್ಕೆ:ಅಮರ್

ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಯಂಗ್  ಅಭಿಷೇಕ್ ಅಭಿನಯದ ‘ಅಮರ್’ ಚಿತ್ರವು ರಿಲೀಸ್ಗೆ ದಿನಾಂಕ ಫಿಕ್ಸ್ ಆಗಿದೆ.

ಅಂಬಿ ಹುಟ್ಟುಹಬ್ಬಕ್ಕೆ ಗಿಫ್ಟಾಗಿ ಮುಂದಿನ ತಿಂಗಳು ಮೇ.31ಕ್ಕೆ ರಾಜ್ಯಾದ್ಯಂತ ಅಮರ್ ರಿಲೀಸ್ ಆಗುತ್ತಿದೆ.

ಅಭಿಷೇಕ್ ಅಂಬರೀಶ್ ನಟನೆಯ ಚೊಚ್ಚಲ ಚಿತ್ರ ‘ಅಮರ್’. ಇಲ್ಲಿ ಅಭಿಷೇಕ್ ಗೆ ನಾಯಕಿಯಾಗಿ ತಾನ್ಯಾ ಹೋಪ್ ಅಭಿನಯಿಸಿದ್ದು ಹಾಡು ಹಾಗೂ ಟ್ರೈಲರ್ನಿಂದಲೇ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು.

ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಮರ್ ಹಾಡುಗಳು ಚಿತ್ರದ ಮೇಲಿನ ಭರವಸೆ ಹೆಚ್ಚಿಸಿದೆ.

ಚಿತ್ರದಲ್ಲಿ ದರ್ಶನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos