ಭಾರತದ ಬೌಲರ್ ಅಂಬಟಿ ರಾಯುಡು ಬೌಲಿಂಗ್ ಗೆ ಐಸಿಸಿ ನಿಷೇಧ

ಭಾರತದ ಬೌಲರ್ ಅಂಬಟಿ ರಾಯುಡು ಬೌಲಿಂಗ್ ಗೆ ಐಸಿಸಿ ನಿಷೇಧ

ನವದೆಹಲಿ: ಭಾರತದ ಬೌಲರ್ ಅಂಬಟಿ ರಾಯುಡು ಅವರಿಗೆ ಸಂಶಯಾಸ್ಪದ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ ಐಸಿಸಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ನಡೆಸುವುದರಿಂದ ಅಮಾನತುಗೊಳಿಸಿದೆ.

ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಶೈಲಿಯ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಈ ಕಾರಣದಿಂದಾಗಿ ಅವರ ಬೌಲಿಂಗ್ ಶೈಲಿ ಕಾನೂನುಬದ್ಧವೆಂದು ಸಾಬೀತುಪಡಿಸಲು 2 ವಾರಗಳ ಕಾಲಾವಕಾಶ ನೀಡಲಾಗಿದೆ.

ಅಷ್ಟರ ತನಕ ಅವರಿಗೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ನಡೆಸಲು ಅವಕಾಶ ಇಲ್ಲದಾಗಿದೆ. ದೇಶಿಯ ಕ್ರಿಕೆಟ್ ನಲ್ಲಿ ಬೌಲಿಂಗ್ ನಡೆಸಲು ರಾಯುಡುಗೆ ಯಾವುದೇ ನಿರ್ಬಂಧ ಇಲ್ಲ.

ಫ್ರೆಶ್ ನ್ಯೂಸ್

Latest Posts

Featured Videos