ಅಂಬಾರಿ ಹೊರುವ ಆನೆಗೆ ತಾಲೀಮು

 ಅಂಬಾರಿ ಹೊರುವ ಆನೆಗೆ ತಾಲೀಮು

ಮೈಸೂರು, ಆ. 29 :  ನಾಡಹಬ್ಬ ದಸರಾ ಮಹೋತ್ಸವ   ಪ್ರಯಯುಕ್ತ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆಯು ತಾಲೀಮು ಆರಂಭಿಸಿವೆ. ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿಯ ನೇತೃತ್ವವಹಿಸುವ ಅರ್ಜುನ ಮತ್ತು ಆತನ ತಂಡಕ್ಕೆ  ದಿನಕ್ಕೆರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ನಡೆಯುವ ತಾಲೀಮು ನೀಡಲಾಗುತ್ತಿದೆ.ಒಂದು ವರ್ಷದಿಂದ ಕಾಡಿನ ಪರಿಸರಕ್ಕೆ ಹೊಂದಿಕೊಂಡಿರುವ ಆನೆಗಳಿಗೆ ನಗರದ ಪರಿಸರಕ್ಕೆ ಹೊಂದಿಕೊಳ್ಳಲು ಮತ್ತು ಇಲ್ಲಿನ ರಸ್ತೆ ಮಾರ್ಗ ಪರಿಚಯವಾಗಲಿ ಎಂಬ ಕಾರಣಕ್ಕೆ ದಸರಾ ಪೂರ್ಣಗೊಳ್ಳುವವರೆಗೂ ತಾಲೀಮು ನೀಡಲಾಗುತ್ತದೆ. ಅರಮನೆಯ ಬಲರಾಮ ದ್ವಾರದ ಮೂಲಕ ತೆರಳಿದ ಆನೆಗಳು ಚಾಮರಾಜ ಒಡೆಯರ್‌ ವೃತ್ತ, ಕೆ.ಆರ್‌. ವೃತ್ತ, ಸಯ್ಯಾಜಿರಾವ್‌ ರಸ್ತೆಯ ಮೂಲಕ ಬನ್ನಿಮಂಟಪ ತಲುಪಿತು. ಆನೆಗಳ ತಾಲೀಮಿನ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಮೇವು, ನೀರು ಮತ್ತೆ ಮಧ್ಯಾಹ್ನದ ವೇಳೆಗೆ ಪುಷ್ಕಳವಾದ ಆಹಾರ ನೀಡಲಾಯಿತು. ಬೆಲ್ಲ, ಕಬ್ಬು, ಆಲದ ಎಲೆ, ಉರುಳಿ ಮತ್ತಿತರ ಕಾಳುಗಳನ್ನು ಹಾಕಿ ಬೇಯಿಸಿದ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಯಿತು.  ವೈದ್ಯರು ನಿಯಮಿತವಾಗಿ ಅದರ ಆರೋಗ್ಯ ಪರೀಕ್ಷಿಸಿದರು. ಸೆ. 28 ರಂದು ದಸರಾ ಮಹೋತ್ಸವ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ತಾಲೀಮು ನೀಡಲಾಗುತ್ತಿದೆ. ಒಂದೆರಡು ವಾರ ಕಳೆದ ಬಳಿಕ ಮರದ ಅಂಬಾರಿ, ಮರಳ ಮೂಟೆ ಇಟ್ಟು ಆನೆಗೆ ಅಂಬಾರಿ ಹೊರುವ ತಾಲೀಮು ನೀಡಲಾಗುವುದು.

 

ಫ್ರೆಶ್ ನ್ಯೂಸ್

Latest Posts

Featured Videos