ಅನಿಲ್ ಅಂಬಾನಿಗೆ ಜೈಲು: ರೂ. 453 ಕೋಟಿ ಪಾವತಿಸದೆ ಹೋದರೆ?

ಅನಿಲ್ ಅಂಬಾನಿಗೆ ಜೈಲು: ರೂ. 453 ಕೋಟಿ ಪಾವತಿಸದೆ ಹೋದರೆ?

ಉದ್ಯಮಿ ಅನಿಲ್ ಅಂಬಾನಿಗೆ ಎರಿಕ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಭಾರೀ ಹಿನ್ನಡೆಯಾಗಿದೆ.

ಅನಿಲ್ ಅಂಬಾನಿ ಹಾಗೂ ಇಬ್ಬರು ನಿರ್ದೇಶಕರು ಎರಿಕ್ಸನ್ ಇಂಡಿಯಾಗೆ 453 ಕೋಟಿ
ರೂ. ನೀಡಬೇಕಿದ್ದು, 4 ವಾರಗಳಲ್ಲಿ ಹಣವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ಹೇಳಿಕೆ. 4 ವಾರಗಳಲ್ಲಿ ಹಣ ಹಿಂದಿರುಗಿಸಿ ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಲು ಸಿದ್ಧರಾಗಿ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶಿಸಿದೆ.

ಎರಿಕ್ಸನ್ ಪ್ರಕರಣದಲ್ಲಿ ಅನಿಲ್ ಅಂಬಾನಿ ಹಾಗೂ ಇನ್ನಿಬ್ಬರು ನಿರ್ದೇಶಕರು ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದೆ. 4 ವಾರದಲ್ಲಿ ಹಣ ಪಾವತಿ ಮಾಡದೆ ಹೋದರೆ ಪ್ರತಿಯೊಬ್ಬರು ರೂ. ಒಂದು ಕೋಟಿ ರೂ. ದಂಡ ಹಾಗು ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಕೋರ್ಟ್ ಹೇಳಿದೆ.

ರಿಲಯನ್ಸ್‌ ಕಮ್ಯುನಿಕೇಷನ್ಸ್‌ಸಂಸ್ಥೆ ಉದ್ದೇಶಪೂರ್ವಕವಾಗಿಯೇ ಹಣ ಪಾವತಿಸಿಲ್ಲ. ಈ ಹಿಂದೆ ಸೂಚನೆ ನೀಡಲಾಗಿತ್ತಾದರೂ ಪಾಲಿಸಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಪೀಠ ಹೇಳಿದೆ. ರಫೇಲ್ ಜೆಟ್ ಒಪ್ಪಂದಕ್ಕೆ ರಿಲಯನ್ಸ್ ಗ್ರೂಪ್ ಬಳಿ ಹಣವಿದೆ. ಆದರೆ ಸಾಲ ತೀರಿಸಲು ಹಣವಿಲ್ಲವೆಂದು ಅನಿಲ್ ಅಂಬಾನಿ ಸುಳ್ಳು ಹೇಳ್ತಿದ್ದಾರೆಂದು ಎರಿಕ್ಸನ್ ಆರೋಪ ಮಾಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos