ಆಡಿಯೋ ಕಂಪೆನಿಯಿಂದ ‘ಅಮರ್’ ಚಿತ್ರತಂಡಕ್ಕೆ ಸಮಸ್ಯೆ

ಆಡಿಯೋ ಕಂಪೆನಿಯಿಂದ ‘ಅಮರ್’ ಚಿತ್ರತಂಡಕ್ಕೆ ಸಮಸ್ಯೆ

ಬೆಂಗಳೂರು,ಮಾ.18, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡದ ಚಿತ್ರರಂಗದಲ್ಲಿ ಬಹುನಿರೀಕ್ಷೆಯ ಚಿತ್ರಗಳಲ್ಲಿ ಅಭಿಷೇಕ್ ಅಭಿನಯದ ‘ಅಮರ್’ ಚಿತ್ರವು ಒಂದು.

ಪ್ರಮೋಶನ್ ಗೆ ತಯಾರಿ ನಡೆಯುತ್ತಿದ್ದ ಚಿತ್ರತಂಡಕ್ಕೆ ಕಾಪಿ ರೈಟ್ ಸಮಸ್ಯೆ ಎದುರಾಗಿದೆ.

ಹೌದು, ಚಿತ್ರದ ಪ್ರಮುಖ ಹಾಡುಗಳಲ್ಲಿ ಒಂದಾಗಿದ್ದ ‘ಒಲವಿನ ಉಡುಗೊರೆ’ ಹಾಡಿಗೆ ಕಾಪಿ ರೈಟ್ ಸಮಸ್ಯೆ ಎದುರಾಗಿದೆ. ಅಂಬರೀಶ್ ಅಭಿನಯದ ಸೂಪರ್ ಹಿಟ್ ‘ಒಲವಿನ ಉಡುಗೊರೆ’ ಚಿತ್ರದ ಹಾಡನ್ನು ‘ಅಮರ್’ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡನ್ನು ಚಿತ್ರದ ಪ್ರಮೋಶನ್ ಗೆ ಬಳಸಿಕೊಳ್ಳಲು ಪ್ಲಾನ್ ಮಾಡಿತ್ತು ಚಿತ್ರತಂಡ.

ಆದರೆ, ಈ ಹಾಡನ್ನು ಪ್ರಮೋಶನ್ ಗೆ ಬಳಸದಂತೆ ಸಂಗೀತ ಆಡಿಯೋ ಕಂಪನಿ ಸೂಚಿಸಿದೆ.

ಕೇವಲ ಚಿತ್ರಮಂದಿರದಲ್ಲಿ ಮಾತ್ರ ಈ ಹಾಡು ಪ್ರಸಾರವಾಗಬೇಕು, ಸೋಷಿಯಲ್ ಮಿಡಿಯಾದಲ್ಲಿ ಈ ಹಾಡನ್ನು ಅಪ್ ಲೋಡ್ ಮಾಡಬಾರದು ಎಂದು ತಾಕೀತು ಮಾಡಿದೆ.

ಅರ್ಜುನ್ ಜನ್ಯ ಸಂಗೀತ ಇರುವ ಈ ಹಾಡು ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗಿದೆ. ಸದ್ಯದಲ್ಲೇ ರಿಲೀಸ್ ಕೂಡ ಮಾಡಲು ಚಿತ್ರತಂಡ ನಿರ್ದರಿಸಿತ್ತು. ಆದರೀಗ ಕಾಪಿ ರೈಟ್ ಸಮಸ್ಯೆ ‘ಅಮರ್’ ಚಿತ್ರತಂಡಕ್ಕೆ ನಿರಾಸೆ ಮೂಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos