ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರೂಕ್ ವಿಧಿವಶ

ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರೂಕ್ ವಿಧಿವಶ

ಬೆಂಗಳೂರು, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಕರ್ನಾಟಕ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಎ.ಎಂ.ಫಾರೂಕ್(75) ಅವರು ವಯೋಸಹಜ ಕಾಯಿಲೆಯಿಂದ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

ರಾಜ್ಯ ಹೈ ಕೋರ್ಟ್​ನಲ್ಲಿ 15 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಫಾರೂಕ್  ಅವರು,  ನಿವೃತ್ತರಾಗುವವರೆಗೂ ಕರ್ನಾಟಕ ಜ್ಯುಡೀಶಿಯಲ್ ಅಕಾಡಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.  ಕರ್ನಾಟಕ ರಾಜ್ಯ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರಾಗಿ 2008ರಿಂದ 2013ರವರೆಗೆ ಕಾರ್ಯನಿರ್ವಹಿಸಿದ್ದರು.

ಅವರು ಕರ್ನಾಟಕ ಬಾರ್​ ಕೌನ್ಸಿಲ್​ನಲ್ಲಿ ಅಡ್ವೋಕೇಟ್ ಆಗಿ 1968ರಲ್ಲಿ ಬೆಂಗಳೂರಿನಲ್ಲಿ ಕಾರ್ಯ ಆರಂಭಿಸಿದ್ದರು. ನಂತರ ಹೈ ಕೋರ್ಟ್​ ಜಡ್ಜ್ ಕೂಡ ಆದರು. ಲ್ಯಾಂಡ್ ಲಿಟಿಗೇಶನ್, ಕ್ರಿಮಿನಲ್, ಸಿವಿಲ್ ಹಾಗೂ ಸಾಂವಿಧಾನಿಕ ವಿಭಾಗದಲ್ಲಿ ನೈಪುಣ್ಯತೆ ಹೊಂದಿದ್ದ ಫಾರೂಕ್, ರಾಜ್ಯ ಸರಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ಆಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ  ಅಪಾರ ಬಂಧುಮಿತ್ರರುಗಳನ್ನು ಅಗಲಿದ್ದಾರೆ.

ಫಾರೂಕ್ ಅವರ ಅಂತ್ಯಕ್ರಿಯೆ ಇಂದು ಸಂಜೆ 4:30ಕ್ಕೆ ನಗರದ ಜಯಮಹಲ್ ನಲ್ಲಿರುವ ಅಬ್ದುಲ್ ಖುದ್ದೂಸ್ ಕಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos