ಹೊಳೆ ಆಲೂರು ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಹೊಳೆ ಆಲೂರು ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಹೊಳೆ ಆಲೂರ,ಜೂ. 26 : ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಹೊಳೆಮಣ್ಣೂರ ಗ್ರಾಮಸ್ಥರು ಶಾಲೆಗೆ ಬೀಗ ಹಾಕುವುದಾಗಿ ಮಂಗಳವಾರ ಎಚ್ಚರಿಕೆ ನೀಡಿದರು. ಆರು ದಶಕಗಳ ಇತಿಹಾಸ ಹೊಂದಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗಿಲ್ಲ. 8 ಜನ ಉತ್ತಮ ಶಿಕ್ಷಕರು, 109 ಗಂಡು, 111 ಹೆಣ್ಣು ಮಕ್ಕಳು ಸೇರಿ 220 ಮಕ್ಕಳನ್ನು ಹೊಂದಿರುವ ಶಾಲೆಯಲ್ಲಿ ಆಟ, ಪಾಠದಲ್ಲಿ ಮಕ್ಕಳು ಸೈ ಎನ್ನಿಸಿಕೊಂಡಿದ್ದಾರೆ. ಆದರೆ, ಇರುವ 7 ಕಟ್ಟಡದಲ್ಲಿ 4 ಕಟ್ಟಡಗಳ ಸಂಪೂರ್ಣ ಕಿತ್ತು ಹೋಗಿದ್ದು ಯಾವಾಗ ಬೀಳುತ್ತೋ ದೇವರೆ ಬಲ್ಲ. ಹೀಗಾಗಿ ಆತಂಕಗೊಂಡ ಶಿಕ್ಷಕರು ಅನಿವಾರ್ಯವಾಗಿ ಮಕ್ಕಳಿಗೆ ಮೈದಾನದಲ್ಲಿ ಬೋಧನೆ ಮಾಡಬೇಕಾಗಿದೆ. ಗ್ರಾಮಕ್ಕೆ ಮಂಜೂರಾಗಿರುವ ಹೈಸ್ಕೂಲಿನ ಮಕ್ಕಳ ಬೋಧನೆಯೂ ಇದೇ ಕಟ್ಟಡದಲ್ಲಿ ನಡೆಯುತ್ತಿದೆ. ಇದರಿಂದಾಗಿ ಯಾರಿಗೂ ಆಟವಾಡಲು ಮೈದಾನಕ್ಕೆ ಜಾಗವಿಲ್ಲದಂತಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos