ಬೆಳಗಾವಿಯಲ್ಲಿ ಒಂಟಿ ಸಲಗ ಪ್ರತ್ಯೇಕ್ಷ!

ಬೆಳಗಾವಿಯಲ್ಲಿ ಒಂಟಿ ಸಲಗ ಪ್ರತ್ಯೇಕ್ಷ!

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ  ದಿನಕ್ಕೆ ಹೆಚ್ಚಾಗುತ್ತಾಯಿದೆ. ಇದರಿಂದ ಜನರು ಆತಂಕ ಪಡುತ್ತಿದ್ದಾರೆ. ಜನವಸತಿ ಪ್ರದೇಶದ ಸಮೀಪದಲ್ಲೇ ಬೀಡು ಬಿಟ್ಟಿರುವ ಏಳು ಕಾಡಾನೆಗಳ ಹಿಂಡು ತೆಂಗು, ಕಂಗು, ಬಾಳೆ ಕೃಷಿಗಳನ್ನು ಪುಡಿಗಟ್ಟಿದೆ. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಸೇರಿ ಪಟಾಕಿ ಸಿಡಿಸಿ, ಬೆಂಕಿ ಹಾಕಿ, ತಮಟೆ, ಚೆಂಡೆ ಬಾರಿ ಕಾಡಾನೆಗಳನ್ನು ಮರಳಿ ಕಾಡಿಗಟ್ಟಲು ಪ್ರಯತ್ನ ನಡೆಸಿದರೂ ಮರಿ ಸಮೇತ ಇರುವ ಆನೆಗಳ ಹಿಂಡು ದೂರ ಸರಿಯದೆ ಜನವಸತಿ ಪ್ರದೇಶದ ಸಮೀಪದಲ್ಲೇ ಬೀಡು ಬಿಟ್ಟಿದ್ದು ನಾಡಿಗೆ ನುಗ್ಗುತಿದೆ. ಕಾರ್ಯಾಚರಣೆ ವೇಳೆ ಹಲವು ಬಾರಿ ಆನೆಗಳು ಜನರನ್ನು ಹಿಮ್ಮೆಟ್ಟಿಸಿದ್ದು ಆತಂಕ ಸೃಷ್ಟಿಸಿತು.

ಬೆಳಗಾವಿಯಲ್ಲಿ ನಿನ್ನೆ  ಮಹಾರಾಷ್ಟ್ರ ಕಾಡಿನಿಂದ ಬಂದಿದ್ದ ಗಜರಾಜ ಬೆಳ್ಳಂ ಬೆಳಗ್ಗೆ ಪ್ರತ್ಯಕ್ಷನಾಗಿದ್ದ. ಬೆಳಗಾವಿಯ ವೈಭವ ನಗರದಲ್ಲಿ ಮೊದಲಿಗೆ ಕಾಡಾನೆಯನ್ನ ಜನರು ನೋಡಿದ್ದಾರೆ. ತಕ್ಷಣವೇ ಬೆಳಗಾವಿ ಎಪಿಎಂಸಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಇತ್ತ ಪೊಲೀಸರು ತಕ್ಷಣ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಬರುವುದರಲ್ಲಿ ಒಂಟಿ ಸಲಗ ಶಾಹು ನಗರದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಅಲ್ಲಿಂದ ಆನೆ ನಡೆದಿದ್ದೇ ದಾರಿ ಎಂಬಂತೆ ಹೋಲಗದ್ದೆ, ನಗರ ಪ್ರದೇಶದಲ್ಲಿ ಹೆಜ್ಜೆ ಹಾಕುತ್ತಾ ಸಾಗಿದ್ದಾನೆ. ಯಾವಾಗ ಕಾಡಾನೆ ಮತ್ತೆ ಸಾರ್ವಜನಿಕ ಪ್ರದೇಶದತ್ತ ಮುಖ ಮಾಡಿತೋ, ಅವಾಗ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಸರಿದಾರಿಗೆ ತಂದಿದ್ದಾರೆ.

ಒಂಟಿ ಸಲಗ ಹೋಗುವುದನ್ನ ಕಂಡ ಕೆಲವರು ಭಯಭೀತಿಯಿಂದ ಮನೆಯಿಂದ ಹೊರಗೆ ಬರಲಿಲ್ಲ. ಈ ಮಧ್ಯೆ ಕಂಗ್ರಾಳಿ ಬಳಿ ಗಜರಾಜ ಸ್ನಾನ ಮಾಡೋ ದೃಶ್ಯಗಳು ಅಂತೂ ಮನಹೋಕವಾಗಿತ್ತು. ಪೊಲೀಸ್ ಮತ್ತು ಅರಣ್ಯ ಇಲಾಖೆ 60 ಜನ ಸಿಬ್ಬಂದಿ ತಂಡವು ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಳಗಾವಿ ಶಾಹು ನಗರದಿಂದ ಮಹಾರಾಷ್ಟ್ರ ಕೋಣವಾಡ ಗ್ರಾಮದ ಅರಣ್ಯದವರೆಗೂ ಬೆನ್ನಟ್ಟಿ ಕಾಡಾನೆಯನ್ನ ಮರಳಿ ಗೂಡಿಗೆ ಸೇರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos