ಅಲೋಕ ಕುಮಾರ್ ನಿವಾಸ ಮೇಲೆ ಮಿಂಚಿನ ದಾಳಿ

ಅಲೋಕ ಕುಮಾರ್ ನಿವಾಸ ಮೇಲೆ ಮಿಂಚಿನ ದಾಳಿ

ಬೆಂಗಳೂರು, ಸೆ. 26 : ಎಂಜಿ ರಸ್ತೆಯಲ್ಲಿರುವ ಅಲೋಕ್ ಕುಮಾರ್ ನಿವಾಸದ ಮೇಲೆ, ಹೈದರಾಬಾದ್ ವಿಭಾಗದ ಸಿಬಿಐ ಎಡಿಜಿಪಿ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 20 ಜನರ ತಂಡ ಮಿಂಚಿನ ದಾಳಿ ನಡೆಸಿ ಪೆನ್ಡ್ರೈವ್, ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ.
ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ(ಕೆಎಸ್ಆರ್ಪಿ)ಯ ಎಡಿಜಿಪಿ ಅಲೋಕ್ಕುಮಾರ್ ನಿವಾಸದ ಮೇಲೆ ಸಿಬಿಐ ಇಂದು ಹಠಾತ್ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಈ ವೇಳೆ ಮನೆಯಲ್ಲಿದ್ದ ಅಲೋಕ್ಕುಮಾರ್ ಅವರನ್ನು ಸಿಬಿಐ ತನಿಖಾ ತಂಡ ಎರಡು ಗಂಟೆಗೂ ಹೆಚ್ಚು ಕಾಲ ಅಲೋಕ್ಕುಮಾರ್ ಅವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದೆ. ಈ ವೇಳೆ ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಮನೆಯ ರಹಸ್ಯ ಸ್ಥಳವೊಂದರಲ್ಲಿ ಅಡಗಿಸಿಟ್ಟಿದ್ದ ದಾಖಲೆಗಳನ್ನು ಪತ್ತೆಹಚ್ಚಿರುವ ಸಿಬಿಐ ತಂಡ ವಶಕ್ಕೆ ತೆಗೆದುಕೊಂಡಿದೆ. ಟೆಲಿಫೋನ್ ಕದ್ದಾಲಿಸಲು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಅನುಮತಿ ಕೊಟ್ಟಿದ್ದರೇ? ಅನುಮತಿ ಕೊಟ್ಟಿದ್ದರೆ ಅವರಿಗೆ ಅನುಮತಿ ನೀಡಿದವರು ಯಾರು? ಇದರ ಹಿಂದಿನ ಉದ್ದೇಶವಾದರೂ ಏನು? ಈ ಪ್ರಕರಣದಲ್ಲಿ ಯಾವ ಯಾವ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ? ಎಂಬುದು ಸೇರಿದಂತೆ ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ಅಲೋಕ್ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತೆಂದು ಸಿಬಿಐ ಮೂಲಗಳು ತಿಳಿಸಿವೆ

ಫ್ರೆಶ್ ನ್ಯೂಸ್

Latest Posts

Featured Videos