ಬಾದಾಮಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ

ಬಾದಾಮಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಆದರೆ ನಾವು ಸರಿಯಾದ ರೀತಿಯ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು ಅದೇ ತರ ನಾವು ಬಾದಾಮಿ ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಉತ್ತಮ ಕಾಣಬಹುದು.
ದಿನವೂ ಒಂದೆರಡು ಬಾದಾಮಿ ಸೇವಿಸಿದರೆ ಅನೇಕ ಕಾಯಿಲೆಗಳಿಂದ ದೂರ ಇರಬಹುದು. ಇದೀಗ ಅಧ್ಯಯನವೊಂದು ಹೊಸ ವಿಚಾರ ಹೊರಹಾಕಿದ್ದು, ಬಾದಾಮಿ ಸೇವಿಸುವುದರಿಂದ ನಿಮ್ಮ ತೂಕವನ್ನು ಇಳಿಸಬಹುದು ಎಂದು ತಿಳಿಸಿದೆ. ಬಾದಾಮಿ ಹೆಚ್ಚು ಪೌಷ್ಟಿಕವಾಗಿದೆ. ವಿಟಮಿನ್ಗಳು ಮತ್ತು ಖನಿಜಗಳು ಸೇರಿದಂತೆ ಕೊಬ್ಬುಗಳು, ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ.
ಬಾದಾಮಿ ತೂಕ ಇಳಿಸಲು ಮಾತ್ರವಲ್ಲದೆ ಹೃದಯದ ಆರೋಗ್ಯ ಕಾಪಾಡುವುದರಲ್ಲೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದೆ. ಬಾದಾಮಿಯಲ್ಲಿ ಪ್ರೋಟೀನ್, ಫೈಬರ್ ಮತ್ತು ಪೋಷಕಾಂಶಗಳು ಸಮೃದ್ಧವಾಗಿವೆ. ಹೀಗಾಗಿ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಬಾದಾಮಿ ಸೇವಿಸಬಹುದು.
ಬಾದಾಮಿಯು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವಾಗ ಅತಿಯಾಗಿ ಸೇವಿಸದಿರುವುದು ಅವಶ್ಯಕ. ಊಟವಾದ ನಂತರ ಸಂಜೆಯ ವೇಳೆಗೆ ಸ್ನಾಕ್ಸ್ ರೀತಿಯಲ್ಲಿ ನಾಲ್ಕೈದು ಬಾದಾಮಿ ತಿನ್ನುವುದು ಒಳ್ಳೆಯದು. ಅಥವಾ ಬೆಳಗ್ಗೆ ಎದ್ದಕೂಡಲೆ ಬಾದಾಮಿಯನ್ನು ನೆನಸಿಟ್ಟು ತಿನ್ನಬಹುದು.
ಅದೂ ಬೇಡವೆಂದರೆ ಬಾದಾಮಿಯ ಸ್ಮೂಥಿ ಮಾಡಿ ಕುಡಿಯಬಹುದು. ಆಗ ಇದಕ್ಕೆ ಬೇರೆ ಹಣ್ಣುಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಬಾದಾಮಿಯನ್ನು ಇತರ ಕೆಲವು ನಟ್ಸ್ಗಳೊಂದಿಗೆ ಸೇವಿಸಿದಾಗ ಅದು ನಿಮ್ಮ ಹೃದಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos