ಅಲ್ಲು ಅರ್ಜುನ್​​ಗೆ ಜನ್ಮದಿನದ ಸಂಭ್ರಮ

ಅಲ್ಲು ಅರ್ಜುನ್​​ಗೆ ಜನ್ಮದಿನದ ಸಂಭ್ರಮ

ಬೆಂಗಳೂರು: ನಟ ಅಲ್ಲು ಅರ್ಜುನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರಿಗೆ ಈಗ 42 ವರ್ಷ ವಯಸ್ಸು. ಅಲ್ಲು ಅರ್ಜುನ್​ಗೆ ಅಭಿಮಾನಿಗಳು, ಕುಟುಂಬದವರು, ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ  ಗಿಫ್ಟ್ ಸಿಕ್ಕಿದೆ. ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಅಲ್ಲು ಅರ್ಜುನ್ ಬರ್ತ್​​ಡೇನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ.

‘ಪುಷ್ಪ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈ ಚಿತ್ರದಿಂದ ಅವರು ಗೆದ್ದು ಬೀಗಿದ್ದಾರೆ. ಈಗ ಅವರ ಸಂಪೂರ್ಣ ಗಮನ ‘ಪುಷ್ಪ 2’ ಮೇಲಿದೆ. ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ ಅನ್ನೋದಕ್ಕೆ ಟೀಸರ್‌ ಬಿಡುಗಡೆಮಾಡಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos