ಅಲಯನ್ಸ್ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳ ಗಾಂಜಾದ ಮೋಜು, ಮಸ್ತಿ

ಅಲಯನ್ಸ್ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳ ಗಾಂಜಾದ ಮೋಜು, ಮಸ್ತಿ

ಬೆಂಗಳೂರು, ಅ. 21: ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಅದ್ಯಾಕೋ ಗೊತ್ತಿಲ್ಲ ಪಾಠದ ಕಡೆಗಿನ ಗಮನಕ್ಕಿಂತಲೂ ಅವರಿಗೆ ಬೇರೆ ಬೇರೆ ಚಟಗಳ ಕಡೆಯೇ ಗಮನಗಳು ಹೆಚ್ಚಾಗಿವೆ. ಇದು ಅಭಿವೃದ್ದಿಯಿಂದ ಆಗ್ತಾ ಇದೀಯೋ. ಅಥವಾ ಒತ್ತಡಗಳಿಂದ ಆಗ್ತಿದೆಯೋ.  ವಿದ್ಯಾರ್ಥಿಗಳು ತಾವು ಮಾಡಬೇಕಾಗಿರುವ ಕೆಸವನ್ನು ಬಿಟ್ಟು ಉಳಿದೆಲ್ಲ ಕೆಲಸಗಳನ್ನು ಮಾಡುವ ಆ ರೀಯತಿ ಚಟಗಳಿಗೆ ದಾಸರಾಗ್ತಾ ಇರೋದಂತು  ಶೊಚನೀಯ ವಿಷಯ.

ದೇಶದಲ್ಲಿ ಅದೆಷ್ಟೋ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಪ್ರಖ್ಯಾತಿಯನ್ನು ಗಳಿಸಿವೆ ಅಂತಹ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ  2015 ರಲ್ಲೆ ದೇಶದಲ್ಲಿ 10 ಶ್ರೇಷ್ಠ ವಿದ್ಯಾಲಯಗಳ ಪೈಕಿ 4ನೇ ಶ್ರೇಷ್ಠ ವಿಶ್ವವಿದ್ಯಾಲಯ ಎಂದು ಪ್ರಖ್ಯಾತಿಗಳಿಸಿದ್ದಂತಹ  ಆನೇಕಲ್ನ ಅಲೈನ್ಸ್ ವಿಶ್ವವಿದ್ಯಾನಿಲಯ ಇಂದಿನ ದಿನಗಳಲ್ಲಿ ಅದ್ಯಾಕೂ ವಿವಾದ ಗಳಿಂದಲೆ ಕುಖ್ಯಾತಿಯನ್ನ ಗಳಿಸಿದೆ. ಮೊನ್ನೆಯಷ್ಟೇ ಅಲಯನ್ಸ್ ಕಾಲೇಜಿನ ಮಾಜಿ ಕುಲಪತಿ ಹತ್ಯೆ ನಡೆದು ಸುದ್ದಿಯಾಗಿತ್ತು.

ಈಗ ಗಾಂಜಾ ವಿಷಯದಲ್ಲಿ ಮತ್ತೆ ಸುದ್ದಿಯಾಗಿದೆ. ಅಲಯನ್ಸ್ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳ ಗಾಂಜಾ ಮೋಜು ಮಸ್ತಿ ಜೋರಾಗಿಯೇ ನಡೀತಿದೆ.  ಇದೀಗ ವ್ಯಾಸಾಂಗ ಮಾಡುತ್ತ ಇರುವ ಬಹುತೇಕ ಎಲ್ಲ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಹಲವಾರು ದೂರುಗಳು ಕೂಡ ದಾಖಲಾಗಿವೆ. ಇದೀಗ ಅದೇ ಕಾಲೇಜಿನ ವಿದ್ಯಾರ್ಥಿಯೋರ್ವಳು ಮಾದಕ ವ್ಯಸನಿಯಾಗಿದ್ದು, ಗಾಂಜಾ ಸೇವಿಸಿ ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ಬಾಯಿಗೆ ಬಂದಂತೆ ಮಾತನಾಡುತ್ತ ರಂಪಾಟ ಮಾಡಿದ್ದಾಳೆ. ಆಕೆಯ ಮಿತ್ರರು ಸ್ನೇಹಿತರು ಆಕೆಯನ್ನ ಎಷ್ಟೇ ಸಮಾಧಾನ ಪಡಿಸಿದರು ಕೂಡ  ಸಮಾಧಾನ ಗೊಳ್ಳದೆ ರಸ್ತೆಯಲ್ಲೆಲ್ಲ ರಂಪಾಟ  ಮಾಡಿದ್ದಾಳೆ.

ನಡುರಸ್ತೆಯಲ್ಲಿಯೇ ಸಿಗರೆಟ್, ಗಾಂಜಾ, ಎಣ್ಣೆ ಹೊಡೆದು ರಂಪಾಟ ಮಾಡ್ತಿದ್ದಾರೆ. ಈ  ಅಲಯನ್ಸ್ ಕಾಲೇಜು ವಿಧ್ಯಾರ್ಥಿಗಳು. ಇಷ್ಟೆಲ್ಲಾ ಆಗ್ತಿದ್ರು ನಮಗೇನು ಗೊತ್ತೇ ಇಲ್ಲವೆಂತ್ತಿದ್ದಾರೆ  ಅಲಯನ್ಸ್ ಕಾಲೇಜಿನ  ಆಡಳಿತ ಮಂಡಳಿ. ಇನ್ನು ಕಾಲೇಜು ವಿಧ್ಯಾರ್ಥಿಗಳ ಅತಿರೇಕದ ನಡವಳಿಕೆ ಬಗ್ಗೆ ಆನೇಕಲ್ ಪೋಲೀಸ್ ಠಾಣೆಗೆ ಸಾಕಷ್ಟು ದೂರು ಹೋಗಿದ್ರು ಕೂಡ ಪೋಲಿಸರು ಈ  ಬಗ್ಗೆ  ತಲೆ ಕೆಡಿಸಿಕೊಳ್ತೀಲ್ಲ. ಇಷ್ಟೆಲ್ಲ ಅವ್ಯವಸ್ಥೆ ನಡೀತ ಇದ್ರು ಆನೇಕಲ್ ಪೋಲಿಸರು ಕಂಡು ಕಾಣದಂತೆ  ಇರೋದಾದ್ರು ಯಾಕೆ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರಕರಣವನ್ನ ಯಾಕೆ  ದಾಖಲು ಮಾಡಿ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನಾದರು ಇತ್ತ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಅಂತ  ಸಾರ್ವಜನಿಕರ ಒತ್ತಾಯಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos