ಮಹಿಳೆ ಜೊತೆ ಸಿಪಿಐ ಕಾಮದಾಟವಾಡಲು ಬಾ ಎಂದ

  • In Crime
  • December 17, 2018
  • 306 Views
ಮಹಿಳೆ ಜೊತೆ ಸಿಪಿಐ ಕಾಮದಾಟವಾಡಲು ಬಾ ಎಂದ

ದೂರು ಕೊಡಲು ಹೋಗಿದ್ದ ಮಹಿಳೆ ಜೊತೆ ಸಿಪಿಐ ಕಾಮದಾಟವಾಡಲು ಬಾ ಎಂದ ಆರೋಪ ಹಿನ್ನಲೆ ಬ್ಯಾಡಗಿ ಸಿಪಿಐ ಚಿದಾನಂದ ಎಂಬುವವರನ್ನು ನಡುರಸ್ತೆಯಲ್ಲಿಯೆ ಮಹಿಳೆ ಮತ್ತು ಸಂಬಂಧಿಕರು ಹೊಡೆದು ಎಳೆದಾಡಿದ್ದಾರೆ.ಮಹಿಳೆಯರು ಮತ್ತು ಸಂಬಂಧಿಕರು ಚಪ್ಪಲಿ ಹಿಡಿದು ಮನಬಂದಂತೆ ಥಳಿಸಿದ್ದಾರೆ.ಈ ಘಟನೆ ಬ್ಯಾಡಗಿ ತಾಲೂಕು ಪಂಚಾಯತ್ ಆವರಣದ ಮುಂದೆ ನಡೆದಿದೆ.ಬ್ಯಾಡಗಿ ಸಿಪಿಐ ಚಿದಾನಂದ ದೂರು ನೀಡಲು ಬಂದ ಸಂತ್ರಸ್ಥೆ ಮಹಿಳೆ ಜೊತೆ ಅಸಭ್ಯ ವರ್ತನೆ ಮಾಡಿದ ಆರೋಪಕ್ಕಿ ಸಿಲುಕಿದಾಗ ಈಗ ಧರ್ಮದೇಟು ತಿಂದಿದ್ದಾರೆ.ತಾಲೂಕು ಪಂಚಾಯತ್ ಆವರಣದಲ್ಲಿ ಗದ್ದಲ ಗಲಾಟೆ ಕಂಡು ಸಾರ್ವಜನಿಕರು ಪುಕ್ಕಟೆ ಮನರಂಜನೆ ತೆಗೆದುಕೊಂಡರು.ಅಲ್ಲದೆ ಸಂಬಂಧಿಕರು ಜೀಪ್ ತಡೆಹಿಡಿದು ಹೊರಎಳೆದು ಖಾಕಿಯನ್ನು ಹರಿದರು.ಸಿ‌ಪಿಐ ಮತ್ತು ಒಬ್ಬ ವೃದ್ದ ಕೈಮುಗುದರು ಬುದ್ದಿಹೇಳಿದರು ಬಿಡದೆ ರಪ್ ರಪ್ ಅಂತಾ ಧರ್ಮದೇಟು ನೀಡಿದರು.ಈ ದೃಶ್ಯಗಳು ಪ್ರಜಾ ಟಿವಿಗೆ ಎಕ್ಸಕ್ಲೂಸಿವ್ ಆಗಿ ಲಬ್ಯವಾಗಿದೆ.ಇದೆಲ್ಲಾ ನಡೆದಿದ್ದು ಪ್ರಜಾ ಟಿವಿ ಕ್ಯಾಮರಾ ಮುಂದೆನೆ.ರಸ್ತೆಯಲ್ಲಿಯೆ ಕರ್ತವ್ಯ ನಿರತ ಸಿಪಿಯ ಮಾನ ಹರಾಜು ಮಾಡಿದ ಮಹಿಳೆಯರು ಹಾಗೂ ಸಂಬಂಧಿಕರು ಆವಾಚ್ಯ ಶಬ್ದಗಳಿಂದ ನಿಂಧಿಸಿದರು.ಚಿದಾನಂದ ಬಳಿಯ ವಿಸಲ್ ವಸ್ತ್ರ ಮತ್ತು ವಾಕಿಟಾಕಿ ಕಸಿದು ಪುಡಿ ಪುಡಿ ಮಾಡಿದರು.ಸಂತ್ರಸ್ತೆಯ ಸಹೋದರ ತಂದೆ ತಾಯಿಗೆ ಕಿರುಕುಳ ನೀಡುತ್ತಿದ್ದನು.ಹೀಗಾಗಿ ಠಾಣೆಗೆ ಕೆಲದಿನಗಳ ಹಿಂದೆ ದೂರು ನೀಡಲು ಹೋದಾಗ ಸಿಪಿಐ ಈ ವೇಳೆ ಸೀರೆ ಬಿಚ್ಚು,ಎಷ್ಟು ದುಡ್ಡುಬೇಕು, ಬಾ ರೂಮ್ ಬುಕ್ ಮಾಡ್ತೆನಿ ಎಂದಿದ್ದನಂತೆ.ಠಾಣೆಯಲ್ಲಿ ಹಿಡಕೊಳೊಕೆ ಬಂದಿದ್ದ ಎಂದು ಮಹಿಳೆಯ ಆರೋಪ ಮಾಡುತ್ತಿದ್ದಾಳೆ.ಈಗ ಈ ಕೇಸ್ ಎಸ್ಪಿ ಕಚೇರಿಯ ಮೆಟ್ಟಿಲು ಹತ್ತಿದೆ.ನ್ಯಾಯಕ್ಕಾಗಿ ಹಾವೇರಿ ಪೋಲಿಸ್ ವರಿಷ್ಟಾದಿಕಾರಿ ಕಚೇರಿಗೆ ಕುಟುಂಬ ಸಮೇತ ಬಂದು ಸಿಪಿಐ ಮೇಲೆ ದೂರು ನೀಡಿದ್ದಾರೆ.ನಿಜವಾಗಿ ಸತ್ಯಾಸತ್ಯೆ ಏನು ಅಂತಾ ಹಾವೇರಿ ಹೆಚ್ಚುವರಿ ಎಸ್ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ಶುರುವಾಗಿದೆ.ಬ್ಯಾಡಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos