ಇಂಗ್ಲೆಂಡ್ ‌ತಂಡ 353 ರನ್​ಗಳಿಗೆ ಆಲೌಟ್

ಇಂಗ್ಲೆಂಡ್ ‌ತಂಡ 353 ರನ್​ಗಳಿಗೆ ಆಲೌಟ್

ಬೆಂಗಳೂರು: ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ.

ಈ ಹಂತದಲ್ಲಿ ಕಣಕ್ಕಿಳಿದ ಜೋ ರೂಟ್ ಹಾಗೂ ಜಾನಿ ಬೈರ್​ಸ್ಟೋವ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಆದರೆ 38 ರನ್​ಗಳಿಸಿದ ಬೈರ್​ಸ್ಟೋವ್ ಅಶ್ವಿನ್ ಎಸೆತವನ್ನು ಗುರುತಿಸುವಲ್ಲಿ ಎಡವಿ ಎಲ್​ಬಿಡಬ್ಲ್ಯೂ ಆದರು. ಈ ವೇಳೆ ಕೇವಲ 112 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಮತ್ತೊಂಡೆದೆ ಕ್ರೀಸ್​ ಕಚ್ಚಿ  ನಿಂತಿದ್ದ ಜೋ ರೂಟ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ರನ್ ಕಲೆಹಾಕುತ್ತಾ ಸಾಗಿದ ರೂಟ್ ತಂಡದ ಮೊತ್ತವನ್ನು 250 ರನ್​ಗಳ ಗಡಿದಾಟಿಸಿದರು.

ಈ ಶತಕದ ಜೊತೆಯಾಟದೊಂದಿಗೆ ಜೋ ರೂಟ್ 219 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಮತ್ತೊಂದೆಡೆ ಬೆನ್ ಫೋಕ್ಸ್ (47) ಹಾಗೂ ಟಾಮ್ ಹಾರ್ಟ್ಲಿ (12) ಔಟಾಗಿದ್ದರು. ಈ ಮೂಲಕ ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 302 ರನ್​ ಕಲೆಹಾಕಿತು.

ಎರಡನೇ ದಿನದಾಟದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಒಲೀ ರಾಬಿನ್ಸನ್ ಹಾಗೂ ಜೋ ರೂಟ್ ಆರಂಭದಲ್ಲೇ ರನ್ ಕಲೆಹಾಕುತ್ತಾ ಸಾಗಿದರು. ಇದೇ ವೇಳೆ ಒಲೀ ರಾಬಿನ್ಸನ್ ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದರು. ಆದರೆ ಈ ಹಾಫ್ ಸೆಂಚುರಿ ಬೆನ್ನಲ್ಲೇ ರಾಬಿನ್ಸನ್ (59) ವಿಕೆಟ್ ಪಡೆಯುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು.

ಇದಾಗ್ಯೂ ಜೋ ರೂಟ್ ಅವರ ಏಕಾಂಗಿ ಹೋರಾಟ ಮುಂದುವರೆಯಿತು. ಅಲ್ಲದೆ ತಂಡದ ಮೊತ್ತವನ್ನು 350 ರ ಗಡಿದಾಟಿಸಿದರು. ಅಂತಿಮವಾಗಿ ಜೇಮ್ಸ್ ಅ್ಯಂಡರ್ಸನ್ (0) ಔಟ್ ಆಗುವುದರೊಂದಿಗೆ ಇಂಗ್ಲೆಂಡ್ ತಂಡ 353 ರನ್​ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ 122 ರನ್ ಬಾರಿ ಜೋ ರೂಟ್ ಅಜೇಯರಾಗಿ ಉಳಿದರು. ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ 4 ವಿಕೆಟ್ ಕಬಳಿಸಿ ಮಿಂಚಿದರೆ, ಆಕಾಶ್ ದೀಪ್ 3 ವಿಕೆಟ್ ಪಡೆದರು.

 

ಫ್ರೆಶ್ ನ್ಯೂಸ್

Latest Posts

Featured Videos