ಅಯ್ಯೋ…ಜೀವಂತ ಇಲಿ ಮರಿ ಗುಳಂ

ಯುವತಿಯೊಬ್ಬಳು ಬಾವಲಿಯ ರೆಕ್ಕೆಗಳನ್ನು ಕಚ್ಚಿ ತಿನ್ನುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಸುತ್ತ ಟೊಮ್ಯಾಟೋ ಸ್ಲೈಸ್ ಜೋಡಿಸಿಟ್ಟಿದ್ದ ಪ್ಲೇಟ್ ನಡುವೆ ಇಲಿ ಮರಿಯನ್ನು ಇಟ್ಟುಕೊಂಡಿರುವ ಈ ವ್ಯಕ್ತಿ ಒಂದೊಂದೇ ಮರಿಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದ. ನೋಡುವಾಗಲೇ ವಿಚಿತ್ರ ಎನಿಸುತ್ತದೆ ಮತ್ತು ಇಲಿ ಮರಿಗಳ ಬಗೆಗೆ ಮರುಕು ಉಂಟಾಗುತ್ತದೆ. ಇದೇ ಕಾರಣಕ್ಕೆ ಈ ವಿಡಿಯೋ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೀವಂತ ಇಲಿ ಮರಿಗಳನ್ನು ಎಂಜಾಯ್ ಮಾಡಿಕೊಂಡು ತಿನ್ನುತ್ತಿದ್ದಾನೆ…! ಯಾವುದೇ ಪಶ್ಚಾತಾಪವಿಲ್ಲದೆ, ಯಾವುದೇ ಅಳುಕಿಲ್ಲದೆ ಈತ ಖುಷಿ ಖುಷಿಯಾಗಿಯೇ ಇಲಿ ಮರಿಗಳನ್ನು ತಿಂದು ಮುಗಿಸುತ್ತಿದ್ದ. ಆದರೆ, ಇದನ್ನು ಕಂಡ ನೆಟ್ಟಿಗರು ಕೋಪದಿಂದಲೇ ಕಮೆಂಟ್ಗಳನ್ನು ಹಾಕುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos