ಅಕ್ಷಯ ತೃತೀಯ ಗ್ರಾಹಕರೇ ಹುಷಾರು, ತೂಕದಲ್ಲಿರಲಿದೆ ಮೋಸ!

ಅಕ್ಷಯ ತೃತೀಯ ಗ್ರಾಹಕರೇ ಹುಷಾರು, ತೂಕದಲ್ಲಿರಲಿದೆ ಮೋಸ!

ಬೆಂಗಳೂರು, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ಚಿನ್ನದಂಗಡಿಗೆ ತೆರಳಿದಾಗ ನಿಮ್ಮ ಮೈಯೆಲ್ಲಾ ಕಣ್ಣಾಗಿರಲಿ. ಇಲ್ಲದಿದ್ದರೆ ನಿಮ್ಮ ಜೇಬಿಗೆ ಕತ್ತರಿ​ ಬೀಳೋದು ಗ್ಯಾರಂಟಿ. ಕಾರಣ, ನಿಮ್ಮ ಕಣ್ಣ ಮುಂದೆಯೇ, ನಿಮಗೆ ಗೊತ್ತಿಲ್ಲದಂತೆ ತೂಕದಲ್ಲಿ ಮೋಸ ಹೋಗಿಬಿಡಬಹುದು. ಇಂದು ಅಕ್ಷಯ ತೃತೀಯ. ಮಹಾಭಾರತದಲ್ಲಿ ದ್ರೌಪತಿಗೆ ಕೃಷ್ಣ ಪರಮಾತ್ಮ ಅಕ್ಷಯಪಾತ್ರೆ ಕೊಟ್ಟ ದಿನ. ಆ ಪಾತ್ರೆಯೊಳಗಿನ ಒಂದಗಳು ಅನ್ನವೂ ಹೇಗೆ ವೃದ್ಧಿ ಆಗುತ್ತಿತ್ತೋ ಹಾಗೆಯೇ, ಈ ದಿನ ಏನು ಖರೀದಿಸದರೂ ಅದು ವೃದ್ಧಿ ಆಗುತ್ತದೆ ಎನ್ನುವ ನಂಬಿಕೆ ಅನೇಕರದ್ದು. ಇದೇ ಕಾರಣಕ್ಕೆ ಹಲವರು ಚಿನ್ನ ಕೊಂಡುಕೊಳ್ಳುತ್ತಾರೆ. ಆದರೆ, ಚಿನ್ನ ಖರೀದಿಸುವ ಮುನ್ನ ಗ್ರಾಹಕರು ಎಚ್ಚರಿಕೆಯಿಂದ ಇರುವುದು ಒಳಿತು. ಈಗ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಚಿನ್ನ ಖರೀದಿವೇಳೆ ನಿಮ್ಮ ಮುಂದೆಯೇ ನಿಮಗೆ ಗೊತ್ತಿಲ್ಲದೇ ಮೋಸ ನಡೆಯುತ್ತದೆ. ಎಲೆಕ್ಟ್ರಾನಿಕ್​ ತಕ್ಕಡಿಗಳೊಳಗೆ ಚಿಪ್​ ಹಾಕಿ ವಂಚನೆ ನಡೆಸುತ್ತಾರೆ. ಆಘಾತಕಾರಿ ವಿಚಾರ ಎಂದರೆ, ರಿಮೋಟ್​​ ಕಂಟ್ರೋನಲ್ಲೇ ತೂಕ ನಿಯಂತ್ರಿಸುತ್ತಾರೆ! ಈ ಮೂಲಕ ಗ್ರಾಹಕರಿಗೆ ನಯವಾಗಿ ವಂಚಿಸುತ್ತಾರೆ. ತೂಕದಲ್ಲಿ ನಡೆಯೋ ಬಾರೀ ವಂಚನೆಯನ್ನ ಬಯಲಿಗೆಳೆದಿದೆ. ಈಗ ಹೆಚ್ಚಿನ ಅಂಗಡಿಗಳಲ್ಲಿ ಸಾಂಪ್ರದಾಯಿಕ ತಕ್ಕಡಿಗಳ ಬದಲು ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ತಕ್ಕಡಿಗಳನ್ನ ಬಳಸಲಾಗುತ್ತೆ. ಈ ತಕ್ಕಡಿಗಳಲ್ಲಿ ವಂಚನೆ ಮಾಡೋ ಅವಕಾಶಗಳ ಕಡಿಮೆ ಎನ್ನಲಾಗುತ್ತಿತ್ತು. ಆದರೆ ಈಗ ಎಲೆಕ್ಟ್ರಾನಿಕ್ ತಕ್ಕಡಿಗಳನ್ನೇ ಟ್ಯಾಂಪರ್​ ಮಾಡೋ ದೊಡ್ಡ ಜಾಲ ನಮ್ಮ ರಾಜ್ಯದಲ್ಲಿ ತಲೆ ಎತ್ತಿದೆ. ಈ ಜಾಲ ಎಲೆಕ್ಟ್ರಾನಿಕ್​ ತಕ್ಕಡಿಯೊಳಗೆ ಸೆನ್ಸಾರ್​ಗಳನ್ನ ಅಳವಡಿಸಿ, ತಮಗೆ ಬೇಕಾದ ರೀತಿಯಲ್ಲಿ ಮಾಪನವನ್ನ ಸೆಟ್​ ಮಾಡುತ್ತಿವೆ. ರಿಮೋಟ್​ ಕಂಟ್ರೋಲ್​ಗಳ ಮೂಲಕ ಗ್ರಾಹಕರಿಗೆ ಗೊತ್ತಿಲ್ಲದಂತೆ ತೂಕದಲ್ಲಿ ಭಾರೀ ಮೋಸ ಮಾಡ್ತಿದೆ. ಎಕ್ಟ್ರಾ ಕೀಪ್ಯಾಡ್​​ಗಳನ್ನು ಬಳಸಿ, ಕೈಚಳಕದ ಮೂಲಕ ನಿರಂತರವಾಗಿ ಗ್ರಾಹಕರನ್ನು ವಂಚಿಸುತ್ತಿವೆ. ಚಿನ್ನದಂಗಡಿಗಳಲ್ಲಿ ಬಳಸುವ ಅತ್ಯಂತ ಸೂಕ್ಷ್ಮ ತಕ್ಕಡಿಗಳಿಗೆ ವಿಂಡ್​ ಶೀಲ್ಡ್​ ಅಥವಾ ಗಾಳಿ, ಧೂಳು ಮುಂತಾದವುಗಳನ್ನ ತಡೆಯಲು ಕವಚ ಹಾಕಲಾಗುತ್ತೆ. ಆದರೆ ಆ ಕವಚಗಳನ್ನೇ ಹಾಕದೆ ಗ್ರಾಹಕರನ್ನು ವಂಚಿಸುವ ಸಾದ್ಯತೆಗಳೂ ಇವೆ. ಹಾಗಾಗಿ ಗ್ರಾಹಕರು ಚಿನ್ನ ಖರೀದಿಸೋ ಮುನ್ನ ತಕ್ಕಡಿಯನ್ನ ಪರೀಕ್ಷಿಸಿ ಚಿನ್ನ ಖರೀದಿಸುವುದು ಉತ್ತಮ. ಲಾಭದಾಸೆ ವ್ಯಾಪಾರಸ್ಥರು ಈ ರೀತಿ ಟ್ಯಾಂಪರ್​ ಆಗಿರೋ ತಕ್ಕಡಿಗಳನ್ನ ಬಳಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿದ್ದಾರೆ. ಅದರಲ್ಲೂ ಹೋಲ್​ಸೇಲ್​ ಅಂಗಡಿಗಳು, ಎಪಿಎಂಸಿ ಯಾರ್ಡ್​, ಪಡಿತರ ಶಾಪ್ಸ್​​, ಕಬ್ಬಿಣ ಮಾರೋ ಅಂಗಡಿಗಳು, ಗುಜರಿ, ಮಾಂಸ, ತರಕಾರಿ ಮಾರುವ ಅಂಗಡಿಗಳಲ್ಲಿ ತೂಕದಲ್ಲಿ ಮೋಸ ಅವ್ಯಾಹತವಾಗಿ ನಡೆಯುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos