ಗಂಗಾವತಿ: ಅಕ್ಷರ ದಾಸೋಹ ನೌಕರರ 4ನೇ ರಾಜ್ಯ ಸಮ್ಮೇಳನ

ಗಂಗಾವತಿ: ಅಕ್ಷರ ದಾಸೋಹ ನೌಕರರ 4ನೇ ರಾಜ್ಯ ಸಮ್ಮೇಳನ

ಗಂಗಾವತಿ: ದೇಶದ ಕಾರ್ಮಿಕರಲ್ಲಿ ಶೇ.90ರಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಈ ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ ವೇತನವಿಲ್ಲ, ಮೂಲಸೌಲಭ್ಯಗಳಿಲ್ಲ, ಕೆಲಸದ ಭದ್ರತೆ ಇಲ್ಲ. ಈ ಎಲ್ಲಾ ಅತಂತ್ರಗಳ ನಡುವೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಡಿಸೆಂಬರ್ 22 ರಿಂದ 24ರವರೆಗೆ ನಡೆಯುತ್ತಿರುವ ಅಕ್ಷರ ದಾಸೋಹ ನೌಕರರ ಕರ್ನಾ‍ಟಕ ರಾಜ್ಯ 4ನೇ ಸಮ್ಮೇಳನದ ಬಹಿರಂಗ ಸಭೆಯನ್ನುದ್ದೇಶಿಸಿ ಇಂದು ಮಾತನಾಡಿದ ಅವರು, ಯಾವ ಬೇಡಿಕೆಗಳಿಗೆ ಹೋರಾಡ್ತೇವೋ ಅವುಗಳ ಜಾರಿಗೆ ಸರ್ಕಾರ ನಡೆಸುವ ಶಾಸನ ಸಭೆಗಳ ಮೇಲೆ ಒತ್ತಡ  ಬೀಳಬೇಕು. ದುಡಿಯುವ ಜನತೆಯನ್ನು ವಂಚಿಸಿ ಯಾವ ಸರ್ಕಾರವೂ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ. ಈ ಬಾರಿಯ ರಾಷ್ರ ವ್ಯಾಪಿ ನಡೆಯುತ್ತಿರುವ ಕಾರ್ಮಿಕರ ಮುಷ್ಕರ ಎಚ್ಚರಿಕೆಯ ಗಂಟೆಯಾಗಲಿ ಎಂದರು.

ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುವಾಗ  ಶಾಲೆಯ ಎಸ್‍ಡಿಎಂಸಿ, ಶಿಕ್ಷಕರು ನೌಕರರ ಮೇಲೆ ಸವಾರಿ ಮಾಡುತ್ತಾರೆ. ಅಕ್ಷರ ದಾಸೋಹದ ಕಮಿಟಿ ಸದಸ್ಯರು ಯಾವುದ್ಯಾವುದೋ ರೂಪದಲ್ಲಿ ಲಂಚ ಕಸಿಯುತ್ತಾರೆ. ಲಂಚ ಕೊಡದೇ ಇದ್ದಲ್ಲಿ, ಬೇರೆ ಬೇರೆ ರೀತಿಯ ಗೂಬೆ ಕುರಿಸಿ ಕೆಲಸದಿಂದ ತೆಗುದು ಹಾಕುತ್ತಾರೆ. ಒಮದು ಕಡೆ ಶಾಲೆಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು, ಇನ್ನೊಂದು ಕಡೆ ಇಲಾಖಾಧಿಕಾರಿಗಳು, ಇವರೆಲ್ಲರ ಮೇಲೆ ಇರುವ ಸರ್ಕಾರ ಸೇರಿ ಬಡ ಹೆಣ್ಣು ಮಕ್ಕಳ ಮೇಲೆ ಸವಾರಿ ನಡೆಸುತ್ತಿರುವ ಜೊತೆಗೆ ಅತ್ಯಂತ ಕ್ರೂರವಾದಂತ ಶೋಷಣೆ ಮಾಡುತ್ತಿದ್ದಾರೆ ಎಂದರು.

ಅಸಂಘಟಿತ ವಲಯದಲ್ಲಿರುವ ಕಾರ್ಮಿಕರು ಕನಿಷ್ಠ ವೇತನ ಕೇಳುತ್ತಿದ್ದಾರೆ. ಇನ್ನೊಂದು ಕಡೆ 6 ಲಕ್ಷ ಕೋಟಿ ಬ್ಯಾಂಕ್‍ ಸಾಲ ಮರು ಪಾವತಿ ಮಾಡದೇ ದೇಶದಿಂದ ಹೋಡಿ ಹೋಗಿ ಮುಳುಗಿಸಿದ್ದಾರೆ. ಬಡವರು ಬ್ಯಾಂಕ್ ಸಾಲ ಕಟ್ಟದೇ ಇದ್ದರೆ ಹರಾಜು ಹಾಕ್ತಾರೆ. ಆದರೆ ಮೋದಿಗೆ ಈ ಬಗ್ಗೆ ಏನೂ ದುಖವಿಲ್ಲ. ಆದರೆ ಮೋದಿಗೆ ಲಕ್ಷಲಕ್ಷ ಲೂಟಿ ಹೊಡೆದು ವಿದೇಶಕ್ಕೆ ಹೋದರೆ ತೊಂದರೆ ಅನಿಸಿಲ್ಲ. ಆದರೆ ಬೆವರು ಬಸಿದು ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ದುಡ್ಡು ಇಲ್ವಂತೆ ಎಂದು ಮೋದಿ ವಿರುದ್ಧ ಹರಿಹಾಯ್ದರು.

ಈಗ ಕೊಡುತ್ತಿರುವ 2000 ರೂ. ವೇತನದಲ್ಲಿ ಒಂದು ಕ್ವಿಂಟಾಲ್ ಅಕ್ಕಿಯೂ ಸಹ ಬರುವುದಿಲ್ಲ. ನೌಕರರಿಗೆ ಕುಟುಂಬ ಅಂತ ಗಂಡ, ತಂದೆ-ತಾಯಿ, ಮಕ್ಕಳು ಇರುತ್ತಾರೆ. ಅವರನ್ನು ಸಾಕುವ ಜೊತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಕುಟುಂಬದ ಅನಾರೋಗ್ಯಗಳಿಗೆ ಔಷಧಿ, ಚಿಕಿತ್ಸೆ ಪೂರೈಸಿಕೊಳ್ಳಬೇಕು. ಆದರೆ ಇಂದಿನ ಅತ್ಯಂತ ಬೆಲೆ ಏರಿಕೆಯ ಸಂದರ್ಭ‍ಗಳಲ್ಲಿ ಈ ಸಂಬಳದಲ್ಲಿ ಹೇಗೆ ಪೂರೈಸಿಕೊಳ್ಳಬೇಕು ಮೋದಿಯೇ ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇಂದು ಕರ್ನಾಟಕದ ಶಾಸನ ಸಭೆಯಲ್ಲಿ 225 ಜನ ಶಾಸನ ಸಭೆ ಸದಸ್ಯರು, ಪಾರ್ಲಿಮೆಂಟ್‍ನಲ್ಲಿ 545 ಪಾರ್ಲಿಮೆಂಟ್ ಸದಸ್ಯರಿದ್ದಾರೆ. ಇವರೆಲ್ಲರಿಗೂ ವೋಟ್ ನೀಡಿದ್ದು ಇದೇ ಕಾರ್ಮಿಕರೇ. ಆದರೆ ಎಂದಿಗೂ ಈ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತಲಿಲ್ಲ. ಆದರೆ ಜಾತಿ, ಧರ್ಮ, ಇನ್ನಿತರ ಭಾವನಾತ್ಮಕ  ವಿಷಯಗಳಿಗೆ ವೋಟ್‍ ಹಾಕುವ ದುರಂತ ನಮ್ಮ ದೇಶದ್ದು. ನಮ್ಮ ದೇಶವನ್ನು ಆಳುವವರು ಯಾರ ಉದ್ದಾರಕ್ಕೆ ಇದ್ದಾರೆ ಅನ್ನೋದನ್ನು ನಾವು ತಿಳಿಬೇಕು. ಬಂಡವಾಳಶಾಹಿಗಳಿಗೆ ಅವರು ಒತ್ತೆಯಾಳುಗಳಾಗಿದ್ದಾರೆ. ಈ ದೇಶದ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸಿ ಬಂಡವಾಳಿಗರ ಏಜೆಂಟರಾಗಿದ್ದಾರೆ. ಈ ನೀತಿಗಳ ವಿರುದ್ಧ  ಜನವರಿಯಲ್ಲಿ ನಡೆಯುವ ರಾಷ್ಟ್ರವ್ಯಾಪಿ ಹೋರಾಟವನ್ನು ಯಶಸ್ವಿಗೊಳಿಸುವ ಮೂಲಕ ಮೋದಿ ಸರ್ಕಾರವನ್ನು ಎಚ್ಚರಿಸಬೇಕು ಎಂದು ಕರೆ ನೀಡಿದರು.

ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಅಕ್ಷರ ದಾಸೋಹ ನೌಕರರ ಅಖಲ ಭಾರತ  ಅಧ್ಯಕ್ಷೆ ಎಸ್‍. ವರಲಕ್ಷಿ ಮಾತನಾಡಿ, 2012ರಲ್ಲಿ ಭಾರತೀಯ ಕಾರ್ಮಿಕ ಸಮ್ಮೇಳನವೆಂಬ ತ್ರಿಪಕ್ಷೀಯ ಕಮಿಟಿ ೊಂದು ರೆಕಮಂಡೆಷನ್ ಮಾಡಿದೆ. ಅಕ್ಷರ ದಾಸೋಹ ನೌಕರರನ್ನು ಕಾಯಂಗೊಳಿಸಿ ಅವರಿಗೆ ಕನಿಷ್ಠ ವೇತನ ನೀಡಬೇಕು ಎಂಬ ಸಿಫಾರಸ್ಸು ಮಾಡಿ 6 ವರ್ಷಗಳು ಕಳೆಸವು. ಕಾಂಗ್ರೆಸ್‍ ನ ದುರಾಡಳಿತಕ್ಕೆ ಬೇಸತ್ತು ಈ ದೇಶದ ಜನ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಆದರೆ ಅವರು ಅಧಿಕಾರಕ್ಕೆ ಬಂದು 4 ವರ್ಷಗಳು ಕಳೆದರೂ ಒಂದೇ ಒಂದು ರೂಪಾಯಿ ವೇತನ ಹೆಚ್ಚಳ ಮಾಡಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಇರುವ ಅನುದಾನವನ್ನು ಮೋದಿ ಸರ್ಕಾರ ಕಡಿತಗೊಳಿಸಿ ಬಂಡವಾಳಗಾರರಿಗೆ ನೀಡ್ತಿದೆ. ಕೇಂದ್ರ ಸರಕಾರ ಅಕ್ಷರ ದಾಸೋಹಕ್ಕೆ ಅನುದಾನ ಕಡಿತಗೊಳಿಸಿ ರಾಜ್ಯ ಸರ್ಕಾರದ ಮೇಲೆ ಹಾಕಿ ಕೈ ತೊಳೆದುಕೊಂಡಿದೆ. ಆದ್ದರಿಂದ ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ಕಾರ್ಮಿಕ ವಿರೋಧಿಗಳಿಗೆ ತಕ್ಕ ಫಾಠ ಕಲಿಸಬೇಕಿದೆ ಎಂದರು.

ಅಕ್ಷರ ದಾಸೋಹ ನೌಕರರ ರಾಷ್ಟ ಮುಖಂಡರಾದ ಎ. ಆರ್. ಸಿಂಧು, ರಾಜ್ಯ ಮುಖಂಡೆ ಎಚ್‍, ಎಸ್, ಸುನಂದಾ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಗೀತಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡರಾದ ಆರ್, ಎಸ್‍, ಬಸವರಾಜ್, ಯಮುನಾ ಗಾಂವ್ಕರ್‍ ಸೇರಿದಂತೆ ಸಾವಿರಾರು ಸಂಖ್ಯೆಯ ನೌಕರರು ಉಪಸ್ತಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos