ಅಕ್ರಮ ಐಸ್ ಫ್ಯಾಕ್ಟರಿ ಮೇಲೆ ಕ್ರಮಕ್ಕೆ ಆಗ್ರಹ

ಅಕ್ರಮ ಐಸ್ ಫ್ಯಾಕ್ಟರಿ ಮೇಲೆ ಕ್ರಮಕ್ಕೆ ಆಗ್ರಹ

ಬೆಂಗಳೂರು: ಮದೀನ ನಗರದಲ್ಲಿ ಅಕ್ರಮ ಹೆಚ್.ಪಿ. ಐಸ್‍ ಫ್ಯಾಕ್ಟರಿ
ಮೇಲೆ ಕ್ರಮ ಕೈಗೊಳ್ಳುವಂತೆ ದಲಿತ ಸೇವಾ ಸಂಘಟನೆ ಆಗ್ರಹಿಸಿದೆ.

ಈ ಕುರಿತು ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಿಗೆ ಪತ್ರ ಬರೆದಿರುವ ಸಂಘಟನೆಯ ರಾಜ್ಯಾಧ್ಯಕ್ಷ ಜೆ.ಚಂದ್ರಪ್ಪ ಅವರು, ಬೊಮ್ಮನಹಳ್ಳಿ ಬಿಬಿಎಂಪಿ ವಲಯದ ಹೊಂಗಸಂದ್ರ ವ್ಯಾಪ್ತಿಯಲ್ಲಿ ಬರುವ ಮದೀನ ನಗರದ 2ನೇ ಅಡ್ಡರಸ್ತೆಯಲ್ಲಿ ಹೆಚ್‍ ಪಿ ಐಸ್‍ ಫ್ಯಾಕ್ಟರಿಯನ್ನು ನಡೆಸುತ್ತಿದ್ದಾರೆ. ಅಲ್ಲಿ ಯಾವುದೇ ಶುಚಿಗೆ ಮಹತ್ವ ನೀಡುವುದಿಲ್ಲ. ಹಾಗೂ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ರಕ್ಷಣೆಯೂ ಇಲ್ಲವೆಂದು ಆರೋಪಿಸಿದ್ದಾರೆ.

ಇಲ್ಲಿ ತಯಾರಿಸಿದ ಐಸ್‍ನ್ನು ಬೊಮ್ಮನಹಳ್ಳಿ ವ್ಯಾಪ್ತಿಯ ಹಲವೆಡೆ ಸಾಗಿಸಲಾಗುತ್ತಿದೆ. ಈ ಕಾರ್ಖಾನೆಯನ್ನು ಯಾವುದೇ ಇಲಾಖೆಯ ಪರವಾನಿಗೆ ಇಲ್ಲದೇ ನಡೆಸುತ್ತಿದ್ದಾರೆ. ಈಗಾಗಲೇ ಬೆಂಗಳೂರು ನಗರದಲ್ಲಿ ಹೆಚ್‍1ಎನ್‍1, ಡೆಂಗ್ಯೂ ಜ್ವರ, ಚಿಕನ್‍ ಗುನ್ಯಾ ಏರಿದಂತೆ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಜನರು ನರಳುತ್ತಿದ್ದಾರೆ.

ಈ ಅಪಾಯಕಾರಿ ಐಸ್‍ ನ ಬಳಕೆಯಿಂದ ಮಕ್ಕಳು, ವೃದ್ಧರು ಬೇಗನೆ ಅನಾರಾಗ್ಯಕ್ಕೆ ತುತ್ತಾಗುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಫ್ಯಾಕ್ಟರಿ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಸಂಘಟನೆ ಆಗ್ರಹಿಸಿದೆ. ಫ್ಯಾಕರಿ ಮೇಲೆ ಕ್ರಮ ಜರುಗಿಸದೇ ಇದ್ದಲ್ಲಿ ಬಿಬಿಎಂಪಿ ಕಚೇರಿ ಮುಂದೆ ಫೆ.7, 2019ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಸಂಘಟನೆ ಎಚ್ಚರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos