ಅಕ್ರಮ ಗೋ ಸಾಗಾಟ : 25 ಜನಕ್ಕೆ ಕಟ್ಟಿ ಹಾಕಿ ಗೂಸಾ

ಅಕ್ರಮ ಗೋ ಸಾಗಾಟ : 25 ಜನಕ್ಕೆ ಕಟ್ಟಿ ಹಾಕಿ ಗೂಸಾ

ಭೋಪಾಲ್, ಜು. 8 : ಮಹಾರಾಷ್ಟ್ರಕ್ಕೆ ಗೋ ಸಾಗಾಟ ನಡೆಸುತ್ತಿದ್ದ 25 ಮಂದಿಯನ್ನು ಕಟ್ಟಿ ಹಾಕಿ, ಥಳಿಸಿ ‘ಗೋ ಮಾತಾ ಕಿ ಜೈ’ ಎಂದು ಹೇಳುವಂತೆ ಬಲವಂತ ಪಡಿಸಲಾಗಿದೆ. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗೋ ಸಾಗಾಟಗಾರರೆಂದು ತಿಳಿಯಲಾದ ವ್ಯಕ್ತಿಗಳು ರಸ್ತೆಯಲ್ಲಿ ಮೊಣಕಾಲೂರಿ ತಮ್ಮ ಕಿವಿ ಹಿಡಿದುಕೊಂಡು ‘ಗೋ ಮಾತಾ ಕಿ ಜೈ’ ಎಂದು ಹೇಳುತ್ತಿರುವುದು ಈ ವೀಡಿಯೋದಲ್ಲಿ ದಾಖಲಾಗಿದೆ. ಎಲ್ಲರನ್ನೂ ಹಗ್ಗದಿಂದ ಕಟ್ಟಲಾಗಿದೆ. ಖಂಡ್ವಾದ ಖಲ್ವಾಸ್ ಪ್ರಾಂತ್ಯದ ಸಾನ್ವಲಿಖೇಡೆ ಗ್ರಾಮದಲ್ಲಿ ನಡೆದ ಈ ಘಟನೆಯ ಹಿಂದೆ ಸುಮಾರು 100ಕ್ಕೂ ಅಧಿಕ ಗ್ರಾಮಸ್ಥರು ಶಾಮೀಲಾಗಿದ್ದಾರೆನ್ನಲಾಗಿದೆ.
”ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಜನರಿಗೆ ಥಳಿಸಿ ಹಿಂಸೆ ನೀಡಿದ ರೈತರು ಸೇರಿದಂತೆ ಗ್ರಾಮಸ್ಥರ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದೇವೆ,” ಎಂದು ಖಂಡ್ವಾ ಎಸ್ಪಿ ಶಿವ್ ದಯಾಳ್ ಸಿಂಗ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos