ಅಂಜನಾದ್ರಿ ಬೆಟ್ಟಕ್ಕೆ ಚಂದನ್ ಶೆಟ್ಟಿ

ಅಂಜನಾದ್ರಿ ಬೆಟ್ಟಕ್ಕೆ ಚಂದನ್ ಶೆಟ್ಟಿ

ಕೊಪ್ಪಳ, ಅ. 24 : ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದಾರೆ. ಚಂದನ್ ಶೆಟ್ಟಿ ಹೊಸಪೇಟೆಯಲ್ಲಿ ನೂತನ ಸಿನಿಮಾ ಪ್ರೊಡಕ್ಷನ್ ಹೌಸ್ ಓಪನಿಂಗ್ಗೆ ಬಂದಿದ್ದರು. ವೇಳೆ ಅವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಹನುಮ ಜನಿಸಿದ ನಾಡು ಎಂದೇ ಪ್ರಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟಕ್ಕೆ ಒಟ್ಟು 575 ಮೆಟ್ಟಿಲುಗಳಿದೆ. ಚಂದನ್ ಈ ಬೆಟ್ಟ ಹತ್ತಿ ಹನುಮನ ದರ್ಶನ ಪಡೆದಿದ್ದಾರೆ.
ಕಳೆದ ತಿಂಗಳಷ್ಟೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಕೂಡ ಅಂಜನಾದ್ರಿ ಬೆಟ್ಟಗೆ ಭೇಟಿ ನೀಡಿ ಹನುಮನ ದರ್ಶನ ಪಡೆದಿದ್ದರು. ಅಂಜನಾದ್ರಿ ಬೆಟ್ಟಕ್ಕೆ ಈ ಹಿಂದೆ ಪ್ರಮುಖ ರಾಜಕಾರಣಿಗಳು ಹಾಗೂ ಸಿನಿಮಾ ಕಲಾವಿದರು ಗಳು ಭೇಟಿ ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos