ಅಜಯ್‌ಸಿಂಗ್‌ಗೆ ಶುಭಕೋರಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಅಜಯ್‌ಸಿಂಗ್‌ಗೆ ಶುಭಕೋರಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು:
ಸದ್ಗುಣಗಳನ್ನು ಹೊಂದಿರುವ ಅಜಯ್‌ ಸಿಂಗ್‌ ಅವರು ಭವಿಷ್ಯದ ನಾಯಕರಾಗಿ ರೂಪುಗೊಳ್ಳಲಿದ್ದಾರೆ
ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದ್ದಾರೆ.

ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ‌ ಆಯೋಜಿಸಿದ್ದ ಕರ್ನಾಟಕ ಸರಕಾರದ ದೆಹಲಿಯ
ವಿಶೇಷ ಪ್ರತಿನಿಧಿಯಾಗಿ ಅಜಯ್‌ ಸಿಂಗ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಜಯ್‌ ಸಿಂಗ್ 2 ಬಾರಿ ಶಾಸಕರಾದವರು. ಆದರೆ ಮೊದಲ ಬಾರಿ ಸರಕಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇವರ ರಾಜಕೀಯ ಜೀವನಕ್ಕೆ ಮೊದಲ ಹೆಜ್ಜೆಯಾಗಲಿ. ಬಹಳ ವರ್ಷಗಳ ಕಾಲ ಜನರ ಸೇವೆ ಮಾಡುವ ಅವಕಾಶ ಸಿಗಲಿ
ದು ಶುಭಕೋರುವೆ ಎಂದರು.

ಧರ್ಮಸಿಂಗ್ ಅವರ ಆದರ್ಶ, ಅವರು ನಡೆದುಕೊಂಡು ಬಂದ ದಾರಿಯನ್ನು ನಾವೆಲ್ಲರೂ ನೆನೆಯಬೇಕಿದೆ. ಅವರ ಕಾಲದಲ್ಲಿ ಪಕ್ಷಾತೀತವಾಗಿ ಅವರನ್ನು ಬೆಂಬಲಿಸಿದ್ದವರು ಇದ್ದಾರೆ. 223 ಶಾಸಕರು ಸಹ ಅವರಿಗೆ ಸಹಕಾರ ನೀಡುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಇಬ್ಬರು ಸೇರಿ 371 ಜೆ ತರಲು ಶ್ರಮಿಸಿದರು. 30 ವರ್ಷದಲ್ಲಿ ಕಲುಬುರಗಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಇವರ ಹಾದಿಯಲ್ಲೇ ಅಜಯ್ ಸಿಂಗ್ ಕೂಡ ನಡೆಯಲಿ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos