ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ವಿಶ್ವ ಸುಂದರಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ವಿಶ್ವ ಸುಂದರಿ

ಮುಂಬೈ, ನ. 1 : ಕರ್ನಾಟಕದ ಕರಾವಳಿ ಬೆಡಗಿ ಐಶ್ವರ್ಯಾ ರೈಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1994 ವಿಶ್ವ ಸುಂದರಿಯಾಗಿ ಕೀರಿಟ ಮುಡಿಗೇರಿಸಿಕೊಂಡಿದ್ದ, ಐಶ್ವರ್ಯಾ ಬಾಲಿವುಡ್ ಆಳಿದ ಚೆಲುವೆ. ನ. 1ರಂದು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ತಮ್ಮ 44ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಮಂಗಳೂರಿನ ಬಂಟ್ ಕುಟುಂಬ ಇವರ ಮೂಲ. ತಂದೆ ಕೃಷ್ಣರಾಜ್, ಜಲಜೀವಶಾಸ್ತ್ರಜ್ಞ ತಾಯಿ ಹೆಸರು ಬೃಂದಾ. ಅಣ್ಣ ಆದಿತ್ಯಾ ರೈ, ಮರ್ಚಂಟ್ ನೇವಿಯಲ್ಲಿ ಎಂಜಿನಿಯರ್. ಐಶ್ ಸ್ಕೂಲ್ ಓದುತ್ತಿದ್ದ ವೇಳೆಯಲ್ಲೇ ಈ ಕುಟುಂಬ ಮಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿ ಇದೀಗ46 ನೇ ವರ್ಷಕ್ಕೆ ಕಾಲಿಡುತ್ತಿರುವ ಐಶ್ವರ್ಯಾ ರೈ ಬಚ್ಚನ್ ಜನ್ಮ ದಿನಾಂಕ 01-11-1973. 9ನೇ ತರಗತಿಯಲ್ಲಿದ್ದಾಗಲೇ ಮಾಡೆಲಿಂಗ್ ಪ್ರಪಂಚಕ್ಕೆ ಎಂಟ್ರಿಯಾಗಿದ್ದ ಐಶ್, ‘ಭಾರತ ಸುಂದರಿ’ ಹಾಗೂ ‘ವಿಶ್ವಸುಂದರಿ’ಯಾಗಿ ಆಯ್ಕೆಯಾಗಿದ್ದು 1994 ರಲ್ಲಿ. ಮಣಿರತ್ನಂ ನಿರ್ದೇಶನದ ‘ಇರುವರ್’ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ.

ಫ್ರೆಶ್ ನ್ಯೂಸ್

Latest Posts

Featured Videos