ಏರ್ಟೆಲ್ ಸೇವೆಯಲ್ಲಿ ಬದಲಾವಣೆ: ಈಗ ಹೆಚ್ಚುವರಿ 1000 ಜಿಬಿ ನೀಡುತ್ತಿದೆ

ಏರ್ಟೆಲ್ ಸೇವೆಯಲ್ಲಿ ಬದಲಾವಣೆ: ಈಗ ಹೆಚ್ಚುವರಿ 1000 ಜಿಬಿ ನೀಡುತ್ತಿದೆ

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಅಧಿಕೃತವಾಗಿ ಮಾರುಕಟ್ಟೆಗೆ ಬರುವುದೊಂದೇ ಬಾಕಿಯಿದೆ. ಆದ್ರೆ ಈಗ್ಲೇ ಇದ್ರ ಬಗ್ಗೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಗ್ರಾಹಕರ ಗಮನ ಜಿಯೋ ಗಿಗಾಫೈಬರ್ ಮೇಲಿದೆ. ಸ್ಪರ್ಧೆಗೆ ಸಿದ್ಧವಾಗಿರುವ ಏರ್ಟೆಲ್, ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ಅಮೆಜಾನ್ ಫ್ರೈಂ ಸದಸ್ಯತ್ವ, ನೆಟ್ಫ್ಲಿಕ್ಸ್ ಸದಸ್ಯತ್ವ ಸೇರಿದಂತೆ ಹೆಚ್ಚುವರಿ ಡೇಟಾಗಳನ್ನು ನೀಡ್ತಿದೆ. ಮೊದಲು ಬೋನಸ್ ಡೇಟಾವನ್ನು ಮಾರ್ಚ್ 31, 2019 ರವರೆಗೆ ನೀಡಲಾಗಿತ್ತು. ಈಗ ಅವಧಿಯನ್ನು ವಿಸ್ತರಿಸಲಾಗಿದೆ. ನೀವು Airtel V-Fiber ಬ್ರಾಡ್ಬ್ಯಾಂಡ್ ಸೇವೆ ಆಯ್ಕೆ ಮಾಡಿಕೊಂಡರೆ 6 ತಿಂಗಳವರೆಗೆ ಹೆಚ್ಚುವರಿ ಡೇಟಾ ನಿಮಗೆ ಸಿಗಲಿದೆ. ಏರ್ಟೆಲ್ ನ ಈ ಪ್ಲಾನ್ ಕೆಲ ನಗರಗಳಲ್ಲಿ 300 ರೂಪಾಯಿಗೆ ಶುರುವಾದ್ರೆ ಮತ್ತೆ ಕೆಲ ನಗರಗಳಲ್ಲಿ 2,199 ರೂಪಾಯಿಯವರೆಗಿದೆ. ಈ ಪ್ಲಾನ್ ಗೆ ಏರ್ಟೆಲ್ ಯಾವುದೇ ಹೆಚ್ಚುವರಿ ಡೇಟಾ ನೀಡ್ತಿಲ್ಲ. ಕಂಪನಿ 799 ರೂಪಾಯಿ ಮೇಲ್ಪಟ್ಟ ಯೋಜನೆಗಳಿಗೆ ಹೆಚ್ಚುವರಿ ಡೇಟಾ ನೀಡ್ತಿದೆ. 40 ಎಂಬಿಪಿಎಸ್ ವೇಗದ ಜೊತೆ 100 ಜಿಬಿ ಹೆಚ್ಚುವರಿ ಡೇಟಾ ನೀಡ್ತಿದೆ. 799 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 500 ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. 999 ರೂಪಾಯಿ ಯೋಜನೆಯಲ್ಲಿ 1000 ಜಿಬಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos