ಕೆ.ಆರ್.ಪುರಂನಿಂದ ಏರ್ ಪೋರ್ಟಿಗೆ ಮೆಟ್ರೋ ಮಾರ್ಗ!

ಕೆ.ಆರ್.ಪುರಂನಿಂದ ಏರ್ ಪೋರ್ಟಿಗೆ ಮೆಟ್ರೋ ಮಾರ್ಗ!

ಬೆಂಗಳೂರು, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಏರ್‌ಪೋರ್ಟ್‌ ಮೆಟ್ರೋ ಮಾರ್ಗದ ಕುರಿತು ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದವು. ಇದೀಗ ಮೆಟ್ರೋ ನಿಗಮವು ಹೊಸ ಸಮೀಕ್ಷೆಯೊಂದನ್ನು ನಡೆಸಿದ್ದು ಅದರ ಪ್ರಕಾರ ಏರ್‌ಪೋರ್ಟ್ ಮಾರ್ಗವು ಕೆಆರ್‌ಪುರಂ ಗೆ ಸಂಪರ್ಕ ಕಲ್ಪಿಸುವಂತೆ ನಿರ್ಮಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ಮಾಹಿತಿ ಪ್ರಕಾರ ಕೆಆರ್‌ಪುರಂ(ನೀಲಿ ಮಾರ್ಗ)ವು ಕೆಂಪೇಗೌಡ ಏರ್‌ಪೋರ್ಟ್‌ಗೆ ಸಂಪರ್ಕ ಸಾಧಿಸಲಿದೆ.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು ಏರ್‌ಪೋರ್ಟ್‌ ಮಾರ್ಗವನ್ನು ಕೆಆರ್‌ಪುರಂ ಮೂಲಕ ಹಾದುಹೋಗುವಂತೆ ಮಾಡಿದರೆ ನಾಗವಾರ, ಹೆಬ್ಬಾಳ, ಯಲಹಂಕ ಮೂಲಕ ಏರ್‌ಪೋರ್ಟ್‌ಗೆ ತೆರಳಲಿದೆ. ಈ ಕುರಿತು ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದ್ದು, ಟೆಂಡರ್ ಕೂಡ ಆಹ್ವಾನಿಸಿದೆ. ಕೆಆರ್‌ಪುರಂ ಮೂಲಕವೇ ಏರ್‌ಪೋರ್ಟ್‌ ಮೆಟ್ರೋ ಖಚಿತ ಏರ್‌ಪೋರ್ಟ್ ನಮ್ಮ ಮೆಟ್ರೋ ಮಾರ್ಗವನ್ನು ಕೆಆರ್‌ಪುರಂ ನಿಂದ ಹಾದುಹೋಗುವಂತೆ ಮಾಡುವುದು ಖಚಿತವಾಗಿದೆ. ಈ ಕುರಿತು ಟೆಂಡರ್ ಆಹ್ವಾನಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಆರ್‌ಪುರಂ ಮಾರ್ಗವೇ ಉತ್ತಮ ಮಾರ್ಗ ಎಂದು ಗುರುತಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos