ಅಗ್ನಿ ಅನಾಹುತದ ನಡುವೆಯೇ ಯಲಹಂಕ ಏರ್ ಶೋ ಮತ್ತೆ ಆರಂಭ

ಅಗ್ನಿ ಅನಾಹುತದ ನಡುವೆಯೇ ಯಲಹಂಕ ಏರ್ ಶೋ ಮತ್ತೆ ಆರಂಭ

ಬೆಂಗಳೂರು: ಉದ್ಯಾನನಗರಿಯ
ಯಲಹಂಕ ವಾಯುನೆಲೆಯಲ್ಲಿ ಶನಿವಾರ ಮತ್ತೆ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ 300ಕ್ಕೂ ಅಧಿಕ ಕಾರುಗಳು
ಭಸ್ಮವಾಗಿದ್ದವು. ಇದರಿಂದಾಗಿ ಕೆಲಕಾಲ ಏರ್ ಶೋ ಅನ್ನು ಸ್ಥಗಿತಗೊಳಿಸಲಾಗಿತ್ತು. ಅಗ್ನಿಶಾಮಕ ದಳದ
ಸಿಬ್ಬಂದಿ ಬೆಂಕಿಯನ್ನು ಆರಿಸಿದ ನಂತರ ಏರ್ ಶೋ ಪುನರಾರಂಭಗೊಂಡಿದೆ.

ಯಲಹಂಕ ವಾಯುನೆಲೆಯ ಗೇಟ್ ನಂ 5ರ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ಒಣ ಹುಲ್ಲಿಗೆ ಮೊದಲು ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್, ಐಶಾರಾಮಿ ಕಾರು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿದ್ದವು. ಹತ್ತಕ್ಕೂ ಅಧಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂರು ಗಂಟೆಗಳ ಕಾಲ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದರು.

ಯಲಹಂಕ ಸುತ್ತಮುತ್ತ ಟ್ರಾಫಿಕ್ ಜಾಮ್:

ಯಲಹಂಕ ವಾಯುನೆಲೆಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ
ಆತಂಕಕ್ಕೊಳಗಾಗಿದ್ದ ಜನರು ಮನೆಯತ್ತ ಪ್ರಯಾಣ ಬೆಳೆಸಿದ್ದರಿಂದ ಯಲಹಂಕದ ಏರ್ ಶೋ ಮಾರ್ಗದ ಬಳಿ ಟ್ರಾಫಿಕ್
ಜಾಮ್ ಸಂಭವಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶಕ್ತಿ ಮೀರಿ ಶ್ರಮಿಸಿದ್ದು,
ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು
ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂಎನ್ ರೆಡ್ಡಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos