ವಾಯುಮಾಲಿನ್ಯ “ಗಂಭೀರ’ ಸ್ಥಿತಿಗೆ

ವಾಯುಮಾಲಿನ್ಯ “ಗಂಭೀರ’ ಸ್ಥಿತಿಗೆ

ನವದೆಹಲಿ, ಅ. 29 : ಈ ಬಾರಿಯೂ ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಗಂಭೀರ ಸ್ಥಿತಿಗೆ ತಲುಪಿದೆ.ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಇದು 740 ಅಂಕ ತಲುಪಿದ್ದು, ಮಂಗಳವಾರ ಮುಂಜಾವ “ಗಂಭೀರ’ ಸ್ಥಿತಿಗೆ ತಲುಪಿರುವುದು ಗೊತ್ತಾಗಿದೆ. ಕೇಂದ್ರ ಸರಕಾರ ಸ್ವಾಮ್ಯದ ವಾಯು ಗುಣಮಟ್ಟ ಮುನ್ಸೂಚನೆ ಮತ್ತು ಸಂಶೋಧನೆ (ಎಸ್ಎಎಫ್ಎಆರ್) ಕೇಂದ್ರ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಮನೆಯ ಒಳಗೆಯೇ ಇರುವಂತೆ ಸೂಚನೆ ನೀಡಿದೆ.
ಮಂಗಳವಾರ ದಿಲ್ಲಿ ವಿ.ವಿ. ವ್ಯಾಪ್ತಿಯಲ್ಲಿ ಪಿಎಂ. 2.5 ಮತ್ತು ಪಿ.ಎಂ. 10 ವಿಷಕಾರಿ ಕಣಗಳ ಪ್ರಮಾಣ 500 ಕ್ಕಿಂತ ಹೆಚ್ಚಾಗಿರುವುದು ಪತ್ತೆಯಾಗಿದೆ. ಇದು ಅತಿ ಗಂಭೀರ ಸ್ಥಿತಿಗಿಂತಲೂ ಹೆಚ್ಚಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos