ಏರ್ ಇಂಡಿಯಾ ನೇಮಕಾತಿ

ಏರ್ ಇಂಡಿಯಾ ನೇಮಕಾತಿ

ನಹದೆಹಲಿ, . 13, ನ್ಯೂಸ್ ಎಕ್ಸ್ ಪ್ರೆಸ್: ಏರ್ ಇಂಡಿಯಾ ನೇಮಕಾತಿ 79 ಟ್ರೈನಿ ಕಂಟ್ರೋಲರ್ಸ್ ಮತ್ತು ಡಾಟಾ ಎಂಟ್ರಿ ಆಪರೇಟರ್ಸ್ (ಡಿಇಓ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 30 ಮತ್ತು ಮೇ 2 ರಂದು ನಡೆಯುವ ವಾಕ್ ಇನ್-ಇಂಟರ್ವ್ಯೂ ನಲ್ಲಿ ಭಾಗವಹಿಸಬಹುದು.

ವಿದ್ಯಾರ್ಹತೆ: ಟ್ರೈನಿ ಕಂಟ್ರೋಲರ್ಸ್ ಹುದ್ದೆಗಳಿಗೆ ಬಿ.ಇ /ಬಿ.ಟೆಕ್ ಅಥವಾ ಡಿಪ್ಲೋಮ ಮತ್ತು ಡಾಟಾ ಎಂಟ್ರಿ ಆಪರೇಟರ್ಸ್ (ಡಿಇಓ) ಹುದ್ದೆಗಳಿಗೆ ಪದವಿ ಅಥವಾ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ: ಏಪ್ರಿಲ್ 1,2019 ರ ಅನ್ವಯ ಗರಿಷ್ಟ 42 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು 5ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳು3 ವರ್ಷ ವಯೋಮಿತಿ ಸಡಿಲಿಕೆಯನ್ನು ಹೊಂದಿರುತ್ತಾರೆ.

ವೇತನದ: ಟ್ರೈನಿ ಕಂಟ್ರೋಲರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 45,000/- ರೂ ಮತ್ತು ಡಾಟಾ ಎಂಟ್ರಿ ಆಪರೇಟರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,000/-ರೂ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ: ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಅಭ್ಯರ್ಥಿಗಳು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ 500/-ರೂ ಮತ್ತು ಟ್ರೈನಿ ಕಂಟ್ರೋಲರ್ಸ್ ಹುದ್ದೆಗಳಿಗೆ 1000/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಸಿಸಬಹುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವಾಕ್ ಇನ್-ಇಂಟರ್ವ್ಯೂ: ಅಭ್ಯರ್ಥಿಗಳು ಏರ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ ಗೆ ಹೋಗಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಿಕೊಳ್ಳಬಹುದು.

ಸಂದರ್ಶನ ನಡೆಯುವ ಸ್ಥಳ: ಸಿಎಂಎಸ್ ಡಿಪಾರ್ಟ್ಮೆಂಟ್, ಏರ್ ಇಂಡಿಯಾ ಲಿಮಿಟೆಡ್, ಜಿಎಸ್ಡಿ ಕಾಂಪ್ಲೆಕ್ಸ್, ಹೊಸ ಎಟಿಸಿ ಟವರ್ ಬ್ಯುಲ್ಡಿಂಗ್ ಎದುರು, ಐಜಿಐಎ ಟರ್ಮಿನಲ್ -2 ಹತ್ತಿರ, ನವದೆಹಲಿ-110037

 

ಫ್ರೆಶ್ ನ್ಯೂಸ್

Latest Posts

Featured Videos