ಆಹಾರದಲ್ಲಿ ಕೊಬ್ಬರಿ ಎಣ್ಣೆಯ ಪ್ರಾಮುಖ್ಯತೆ ಎಷ್ಟು?

ಆಹಾರದಲ್ಲಿ ಕೊಬ್ಬರಿ ಎಣ್ಣೆಯ ಪ್ರಾಮುಖ್ಯತೆ ಎಷ್ಟು?

ಆ್ಯಂಟಿ ಫಂಗಲ್‌, ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ವೈರಲ್‌ ಅಂಶ ಹೊಂದಿರುವ ಕೊಬ್ಬರಿ ಎಣ್ಣೆ ದೇಹಕ್ಕೆ ಉತ್ತಮ ಎನರ್ಜಿ ನೀಡುತ್ತದೆ. ಆಹಾರದಲ್ಲಿ ತೆಂಗಿನೆಣ್ಣೆ ಬಳಸುವುದರಿಂದ ಏನೆಲ್ಲ ಲಾಭ ಇದೆ.

ಇಮ್ಯೂನಿಟಿ ಬೂಸ್ಟ್‌ ಮಾಡುತ್ತದೆ: ಎದೆ ಹಾಲಿನಂತೆ ತೆಂಗಿನ ಎಣ್ಣೆಯಲ್ಲೂ ಲಾರಿಕ್‌ ಆಸಿಡ್‌ ಇದೆ. ಇದು ಆ್ಯಂಟಿ ಫಂಗಲ್‌, ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ವೈರಲ್‌ ಅಂಶ ಹೊಂದಿದೆ. ಈ ಮೂಲಕ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಥ್ಲೆಟ್‌ಗಳು ಇದನ್ನು ತಮ್ಮ ಡಯಟ್‌ನಲ್ಲಿ ಸೇರಿಸಿಕೊಂಡರೆ ಉತ್ತಮ. 

ಇದು ದೇಹದಲ್ಲಿ ಎನರ್ಜಿ ಉತ್ಪಾದನೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯ ಸೇವಿಸುವುದರಿಂದ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಜೊತೆಗೆ ಒತ್ತಡ ನಿವಾರಿಸಿ ನರಗಳನ್ನು ರಿಲ್ಯಾಕ್ಸ್​ ಮಾಡುತ್ತದೆ. ಸ್ಯಾಚುರೇಟೆಡ್‌ ಫ್ಯಾಟ್‌ ಹೃದಯಕ್ಕೆ ಮಾರಕವಾಗಿದೆ. ಆದರೆ ತೆಂಗಿನೆಣ್ಣೆಯಲ್ಲಿ ಮೀಡಿಯಂ ಚೈನ್​ ಸ್ಯಾಚುರೇಟೆಡ್​ ಫ್ಯಾಟ್​ ಇರುವುದರಿಂದ ಇದು, ಒಳ್ಳೆಯ ಕೊಲೆಸ್ಟ್ರಾಲ್​ನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್​ ಮಟ್ಟವನ್ನು ತಗ್ಗಿಸುತ್ತದೆ. ತೆಂಗಿನ ಎಣ್ಣೆ ಹೃದಯವು ಆರೋಗ್ಯಯುತವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. 

ತೆಂಗಿನ ಎಣ್ಣೆ ಕೂದಲು ಮತ್ತು ತ್ವಚೆ ಆರೋಗ್ಯ ಪೂರ್ಣವಾಗಿರಲು ಸಹಾಯಕಾರಿ. ತ್ವಚೆ ಮತ್ತು ಕೂದಲಿಗೆ ಮಾಯಿಶ್ಚರೈಸ್​ ನೀಡುವುದರ ಜೊತೆಗೆ ಬ್ಯಾಕ್ಟೀರಿಯಾ ಸೋಂಕುಗಳಿಂದ ಕಾಪಾಡಿ ಆರೋಗ್ಯವಾಗಿರುವಂತೆ ಸಹಾಯ ಮಾಡುತ್ತದೆ. ಯಾವುದೇ ರೀತಿಯ ಕಲೆಗಳಿಗೆ ತೆ೦ಗಿನ ಎಣ್ಣೆ ಬಳಸಬಹುದು. ಗರ್ಭಿಣಿ ಹೆ೦ಗಸರು ತೆ೦ಗಿನ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಸ್ಟ್ರೆಚ್​ ಮಾರ್ಕ್​ ಉಂಟಾಗುವುದಿಲ್ಲ. ಜೊತೆಗೆ ಕಪ್ಪು ಕಲೆಗಳನ್ನು ಕ್ರಮೇಣ ನಿವಾರಿಸುತ್ತದೆ. ಹಾಗಾಗಿ ತೆಂಗಿನೆಣ್ಣೆ ಎಲ್ಲಾ ರೀತಿಯಲ್ಲೂ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಉತ್ತಮವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos