ಮತ್ತೆ ಮಾ. 31 ರವರೆಗೆ ಕರ್ನಾಟಕ ಸ್ತಬ್ಧ.!

ಮತ್ತೆ ಮಾ. 31 ರವರೆಗೆ ಕರ್ನಾಟಕ ಸ್ತಬ್ಧ.!

ಬೆಂಗಳೂರು, ಮಾ. 18: ವಿಶ್ವದಲ್ಲಿ ಕೊರೊನಾ ವೈರಸ್ಸಿನಿಂದ ಹಲವಾರು ಜನಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ನಮ್ಮ ರಾಜ್ಯದಲ್ಲೂ ಸಹ ಕೊರೊನಾ ವೈರಸ್ನಿಂದ ಒಂದು ಬಲಿಯಾಗಿದೆ ಆದ್ದರಿಂದ ಕೊರೊನಾ ವೈರಸ್ಸಿನಿಂದ ದೂರವಿರಲು ಮಾರ್ಚ್ 21ರವರೆಗೆ ಎಲ್ಲಾ ಸಿನಿಮಾ ಥಿಯೇಟರ್ ಮತ್ತಿತರ ಸ್ಥಳಗಳನ್ನು ಬಂದ್ ಮಾಡಲಾಗಿತ್ತು. ಮುಖ್ಯಮಂತ್ರಿ ಇಂದು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆದಿದೆ ಈ ಸಭೆಯಲ್ಲಿ ಮಾರ್ಚ್ 31ರವರೆಗೆ ಮಾಲು ಥಿಯೇಟರ್ ಗಳಂತಹ ಜನಸಂದಣಿಯ ಸ್ಥಳಗಳನ್ನು ಬಂದ್ ಮಾಡಲಾಗುವು ಎಂದು ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ತಡೆಗಾಗಿ 200 ಕೋಟಿ ರೂಪಾಯಿ ಮೀಸಲಿಡುವುದಲ್ಲದೇ, ರಾಜ್ಯದಲ್ಲಿ ಮಾರ್ಚ್ 31ರ ವರೆಗೆ ಕರ್ನಾಟಕ ಬಂದ್ ಮುಂದುವರೆಸಲು, ಪ್ರತಿ ಜಿಲ್ಲೆಯಲ್ಲೂ ಆರೋಗ್ಯ ಸಚಿವರು, ವೈದ್ಯಕೀಯ ಸಚಿವರು, ಗೃಹ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಲು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಇಂದು ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಿರುವ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆಸಲಾಯಿತು. ಈ ಕುರಿತಂತೆ ಸದನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸದನದ ಗಮನಕ್ಕೆ ತಂದ ಅವರು, ಸಚಿವ ಸಂಪುಟ ಸಭೆಯಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನೂ ಕೊರೊನಾ ವೈರಸ್ ವಿರುದ್ಧದ ಸಮರಕ್ಕೆ, ಮುಂಜಾಗ್ರತಾ ಕ್ರಮ ಸೇರಿದಂತೆ ವೈದ್ಯಕೀಯ ವೆಚ್ಚಕ್ಕಾಗಿ 200 ಕೋಟಿಯನ್ನು ನಿಗಧಿ ಪಡಿಸಲಾಗಿದೆ. ಈ ಹಿಂದಿನ ಎಲ್ಲಾ ಮಾರ್ಗ ಸೂಚಿಗಳನ್ನು ಮುಂದುವರೆಸುವಂತ ನಿರ್ಣಯಗಳನ್ನು ಕೈಗೊಂಡಿರುವ ರಾಜ್ಯ ಸಚಿವ ಸಂಪುಟ ಸಭೆ, ಮಾರ್ಚ್ 31ರ ವರೆಗೆ ಮತ್ತೆ ರಾಜ್ಯದಲ್ಲಿ ಬಂದ್ ಮುಂದುವರೆಸುವಂತ ನಿರ್ಣಯವನ್ನು ಕೈಗೊಳ್ಳಲಾಗಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇದಷ್ಟೇ ಅಲ್ಲದೇ ಮತ್ತೆ ಮಾರ್ಚ್ 31ರ ವರೆಗೆ ಕರ್ನಾಟಕ ಲಾಕ್ ಡೌನ್ ಮಾಡಲಿದ್ದು, ಮಾಲ್, ಥಿಯೇಟರ್, ಪಬ್, ಕ್ಲಬ್ ಬಂದ್ ಆಗಲಿದೆ. ಮದುವೆ, ನಿಶ್ಚಿತಾರ್ಥಕ್ಕೂ ಬ್ರೇಕ್ ಬಿದ್ದಿದೆ. ಸಂತೆ, ಜಾತ್ರೆ, ರಥೋತ್ಸವವೂ ಇಲ್ಲ. ಈಜು, ಬೇಸಿಗೆ ಶಿಬಿರ, ಪ್ರವಾಸ ರದ್ದು ಪಡಿಸಲಾಗಿದೆ. ಯುಗಾದಿ ಸಂಭ್ರಮಕ್ಕೂ ಬ್ರೇಕ್ ಹಾಕಿರುವ ಸರ್ಕಾರ, ರಾಜ್ಯದ ಎಲ್ಲ ದೇವಾಲಯಗಳೂ ಬಂದ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಿಗೆ. ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಕೆ ಮಾಡಿದೆ.

ಶಕ್ತಿ ಸೌಧಗಳಿಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ. 1 ವಾರಗಳ ಕಾಲ ರಾಜ್ಯದಲ್ಲಿ ಬಂದ್ ಮುಂದುವರೆಸಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos