20 ವರ್ಷದ ಬಳಿಕ ‘ಆಪರೇಶನ್ ವಿಜಯ್’ ನನೆಪು

20 ವರ್ಷದ ಬಳಿಕ ‘ಆಪರೇಶನ್ ವಿಜಯ್’ ನನೆಪು

ಕಾರ್ಗಿಲ್ , ಜು. 9 : ಕಾರ್ಗಿಲ್ ಯುದ್ಧದ 20 ವರ್ಷಗಳ ನಂತರ ಭಾರತೀಯ ಸೇನೆ ಆಪರೇಷನ್ ವಿಜಯ್ ನೆನಪನ್ನು ಮರುಸೃಷ್ಟಿ ಮಾಡಿದೆ. 2 ರಜಪುತಾನ ರೈಫಲ್ಸ್ ತಂಡ ತೊಲೊಲಿಂಗ್ ತುದಿಗೆ ಕಾಲ್ನಡಿಗೆಯಲ್ಲಿ ತಲುಪಿದ್ದು, ಟೈಗರ್ ಹಿಲ್ ನಲ್ಲಿ ಬಲಿದಾನ ಮಾಡಿ ಪಾಕಿಸ್ತಾನದ ವಿರುದ್ಧ ಸಾಧಿಸಿದ ವಿಜಯವನ್ನು ಸ್ಮರಿಸಿದ್ದಾರೆ. ಇದೇ ವೇಳೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ.
ಜೂ.22 ರಂದು ಜೈಸಲ್ಮೇರ್ ನಿಂದ 2 ಆರ್ ಎಜೆಆರ್ ಐ ಎಫ್ ನ ತಂಡ ತೊಲೊಲಿಂಗ್ ಬೆಟ್ಟಕ್ಕೆ ಕಾಲ್ನಡಿಗೆಯನ್ನು ಪ್ರಾರಂಭಿಸಿತ್ತು. ಇದೇ ವೇಳೆ ಜಮ್ಮು-ಕಾಶ್ಮೀರ್ ರೈಫಲ್ಸ್ ತಂಡವೂ ಬಾತ್ರಾ ಟಾಪ್ ಹಾಗೂ ಟೈಗರ್ ಹಿಲ್ ಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಆಪರೇಷನ್ ವಿಜಯ್ ನೆನಪಿನಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos