ಕೊಹ್ಲಿಗೆ ವಿಶೇಷ ಸಲಹೆ ನೀಡಿದ ಮಿಸ್ಟರ್‌ 360

ಕೊಹ್ಲಿಗೆ ವಿಶೇಷ ಸಲಹೆ ನೀಡಿದ ಮಿಸ್ಟರ್‌ 360

ಬೆಂಗಳೂರು: ಐಪಿಎಲ್​ನ 16 ಆವೃತ್ತಿಗಳು ಮುಗಿದರೂ ಕೋಟ್ಯಾಂತರ ಅಭಿಮಾನಿಗಳ ಕನಸು ಇನ್ನು ನನಸಾಗಿಲ್ಲ. ಈ ಬಾರಿಯಾದರೂ ಆರ್​ಸಿಬಿ ಕಪ್ ಗೆಲ್ಲಲಿ ಎಂಬುದು ಎಲ್ಲರ ಆಶಯವಾಗಿದೆ. ಅದಾಗ್ಯೂ ಆರ್​​ಸಿಬಿ ಪ್ರಸ್ತುತ ಆಡಿರುವ 4 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿದೆ. ಇದು ತಂಡವನ್ನು ಪ್ಲೇ ಆಫ್ ಹಂತಕ್ಕೆ ತಲುಪಲು ಹಿನ್ನಡೆಯನ್ನುಂಟು ಮಾಡಿದೆ. ಈ ನಡುವೆ ಆರ್​ಸಿಬಿಗೆ ಗೆಲುವಿನ ಮಂತ್ರವನ್ನು ವಿವರಿಸಿರುವ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಂಡದ ಆಧಾರಸ್ತಂಭ ವಿರಾಟ್ ಕೊಹ್ಲಿಗೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ತಂಡದ ಉತ್ತಮ ಪ್ರದರ್ಶನಕ್ಕೆ ಕೊಹ್ಲಿ ಬಹಳ ಮುಖ್ಯ ಎಂದು ಬಣ್ಣಿಸಿರುವ ಅವರು ಆರ್‌ಸಿಬಿ ಟೂರ್ನಿಯಲ್ಲಿ ಉಳಿಯಬೇಕಾದರೆ ಕೊಹ್ಲಿ ಮಧ್ಯಮ ಓವರ್‌ಗಳಲ್ಲಿ ಬ್ಯಾಟ್ ಬೀಸುವುದು ಬಹಳ ಮುಖ್ಯ ಎಂದಿದ್ದಾರೆ.

ಆದರೆ ಕೊಹ್ಲಿಗೆ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕು ಎಂದಿರುವ ಡಿವಿಲಿಯರ್ಸ್, ಕೊಹ್ಲಿ 6 ರಿಂದ 15 ಓವರ್‌ಗಳ ನಡುವೆ ಕ್ರೀಸ್‌ನಲ್ಲಿ ಇರಬೇಕು ಎಂದು ನಾನು ಬಯಸುತ್ತೇನೆ. ಕೊಹ್ಲಿ ಈ ರೀತಿ ಆಡುವುದನ್ನು ನೋಡಲು ನಾನು ಬಯಸುತ್ತೇನೆ. ಆಗ ಮಾತ್ರ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ತನ್ನ ಸಂಪೂರ್ಣ ಶಕ್ತಿ ಪ್ರದರ್ಶಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಟೂರ್ನಿಯಲ್ಲಿ ಆರ್‌ಸಿಬಿ ಮಿಶ್ರ ಆರಂಭ ಪಡೆದಿದೆ. ಆದರೆ ತಂಡವು ಆವೇಗವನ್ನು ಮರಳಿ ಪಡೆಯಲು ಮತ್ತು ಪಾಯಿಂಟ್ ಪಟ್ಟಿಯಲ್ಲಿ ಮೇಲೆ ಬರಲು, ಎರಡು ದೊಡ್ಡ ಗೆಲುವುಗಳನ್ನು ದಾಖಲಿಸುವುದು ಅವಶ್ಯಕ.

 

ಫ್ರೆಶ್ ನ್ಯೂಸ್

Latest Posts

Featured Videos