ಅಡ್ವಾಣಿ ನಿವಾಸದಲ್ಲಿ ಧ್ವಜಾರೋಹಣ ರದ್ದು

ಅಡ್ವಾಣಿ ನಿವಾಸದಲ್ಲಿ ಧ್ವಜಾರೋಹಣ ರದ್ದು

ನವದೆಹಲಿ, ಆ. 15 : ರಾಜಕೀಯ ಭೀಷ್ಮ, ಕೇಸರಿ ಪಡೆ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ 5 ದಿನದಿಂದ ಅವರು ವೈರಲ್ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಅಡ್ವಾಣಿ ನಿವಾಸದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಇರುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಆ.7 ರಂದು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾದ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು. ಆ ವೇಳೆ ಸುಷ್ಮಾರನ್ನು ನೆನೆದು ಅವರು ತೀವ್ರ ದುಃಖಿತರಾಗಿದ್ದರು. ಅವರ ನಿವಾಸದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ರದ್ದಾಗಿದೆ

ಫ್ರೆಶ್ ನ್ಯೂಸ್

Latest Posts

Featured Videos