ಅದಿತಿ ಅದೃಷ್ಟದ ನಟಿ ಎಂದೇ ಹೇಳಬಹುದು

ಅದಿತಿ ಅದೃಷ್ಟದ ನಟಿ ಎಂದೇ ಹೇಳಬಹುದು

ಬೆಂಗಳೂರು, ಸೆ. 30: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಹುಡುಗಿಯರದ್ದೇ ಹವಾ. ಹೌದು, ನಟಿ ಅದಿತಿ ಪ್ರಭುದೇವ ಸದ್ಯದ ಮಟ್ಟಿಗೆ ಗಾಂಧಿನಗರಿಗರ ಹಾಟ್ ಫೇವರೇಟ್. ವರ್ಷದಲ್ಲೇ ಈ ನಟಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಬಿಝಿ ನಟಿ ಎನಿಸಿಕೊಂಡಿದ್ದಾರೆ. ಅದು ಎಷ್ಟರಮಟ್ಟಿಗೆ ಅಂದರೆ, ಕೇವಲ 2 ವರ್ಷದಲ್ಲಿ 12 ಚಿತ್ರಗಳಲ್ಲಿ ಅವಕಾಶ ಪಡೆದಿರುವುದು. ಸಾಮಾನ್ಯವಾಗಿ ನಟಿಯರು ವರ್ಷಕ್ಕೆ 1 ಅಥವಾ 2 ಹೆಚ್ಚೆಂದರೆ, 3 ಚಿತ್ರಗಳಲ್ಲಿ ನಟಿಸಬಹುದು.

ಆದರೆ, ಅದಿತಿ ಮಾತ್ರ ವರ್ಷಕ್ಕೆ 4, 5 ಚಿತ್ರಗಳಲ್ಲಿ ನಟಿಸುವ ಮೂಲಕ ಮೆಲ್ಲನೆ ಗಾಂಧಿನಗರದಲ್ಲಿ ಗಟ್ಟಿನೆಲೆ ಕಾಣುವ ಮುನ್ಸೂಚನೆ ನೀಡಿದ್ದಾರೆ.

ಅದಿತಿ ಅದೃ

ಷ್ಟದ ನಟಿ ಎಂದೇ ಹೇಳಬಹುದು. ತನ್ನ ಮೊದಲ ಚಿತ್ರದಲ್ಲೇ ಅಜೇಯ್ರಾವ್ ಜೊತೆಗೆ ತೆರೆ ಹಂಚಿಕೊಂಡರು. “ಧೈರ್ಯಂ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅದಿತಿ, ಅಲ್ಲಿಂದ ಹಿಂದಿರುಗಿ ನೋಡದೆ, ಸಾಲು ಸಾಲು ಚಿತ್ರಗಳಲ್ಲಿ ಬಿಝಿಯಾದರು.

ಹೊಸಬರ ಜೊತೆ “ಬಜಾರ್’, “ಆಪರೇಷನ್ ನಕ್ಷತ್ರ’ಚಿತ್ರ ಮಾಡಿದರು. ಆ ಬಳಿಕ ಚಿರಂಜೀವಿ ಸರ್ಜಾ ಜೊತೆಗೆ “ಸಿಂಗ’, ಜಗ್ಗೇಶ್ ಜೊತೆಯಲ್ಲಿ “ತೋತಾಪುರಿ’ ಮತ್ತು “ತೋತಾಪುರಿ-2′ ಚಿತ್ರದಲ್ಲಿ ಕಾಣಿಸಿಕೊಂಡರು. ದಯಾಳ್ ಪದ್ಮನಾಭ್ ನಿರ್ದೇಶನದ “ರಂಗನಾಯಕಿ’, “ಬ್ರಹ್ಮಚಾರಿ’,”ದಿಲ್ಮಾರ್’, “ಒಂಬತ್ತನೇ ದಿಕ್ಕು’,”ಗಾಳಿಪಟ -2′ ಹಾಗು “ಕುಸ್ತಿ’ ಚಿತ್ರಗಳಲ್ಲಿ ಅದಿತಿ ನಾಯಕಿ. ಈ ಪೈಕಿ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಸದ್ಯಕ್ಕೆ ಬಿಡುಗಡೆಗೆ ಉಳಿದ ಚಿತ್ರಗಳು ಸಿದ್ಧತೆಯಲ್ಲಿವೆ. ಉಳಿದ ಒಂದಷ್ಟು ಚಿತ್ರಗಳು ಚಿತ್ರೀಕರಣದಲ್ಲಿವೆ.

 

ಫ್ರೆಶ್ ನ್ಯೂಸ್

Latest Posts

Featured Videos