ಅಧಿಕಾರಿಗಳ ವಾಹನಗಳು ನಿಷೇಧ!?

ಅಧಿಕಾರಿಗಳ ವಾಹನಗಳು ನಿಷೇಧ!?

ಬೆಂಗಳೂರು, ಜು. 18 : ಬೆಂಗಳೂರು ನಗರದಲ್ಲಿರು ಲಾಲ್ ಬಾಗ್, ಸಸ್ಯಗಳ ಕಾಶಿ ಸೌಂದರ್ಯ ರಮಣೀಯ ಲಾಲ್ ಬಾಗ್ ಒಳಗಡೆ ಜುಲೈ8 ರಿಂದಲೇ ಗಣ್ಯರು ಮತ್ತು ಅಧಿಕಾರಿಗಳ ವಾಹನಗಳನ್ನು ಸಂಪೂರ್ಣವಾಗಿ ನಿಷೇದ ಮಾಡಲಾಗಿದೆ. ಯಾರೇ ಅಧಿಕಾರಿಗಳು ಬಂದರೂ ಸೈಕಲ್ ಮತ್ತು ಬ್ಯಾಟರಿ ವಾಹನಗಳ ಮೂಲಕ ಓಡಾಡ ಬೇಕು. 240 ಕಿಲೊಮೀಟರ್ ಎಕರೆ ಪ್ರದೇಶದಲ್ಲಿ ಇರುವ ಉದ್ಯಾನವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಮತ್ತು ಪ್ರವೇಶ ದ್ವಾರದಿಂದ ಕಛೇರಿಗೆ ಹೋಗುವ ನೌಕರರಿಗೆ ಸೈಕಲ್ ಒದಗಿಸಲಾಗಿದೆ. ಬೈಸಿಕಲ್ ತುಳಿಯಲಾಗದವರಿಗೆ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ.

ತೋಟಗಾರಿಕೆ ಇಲಾಖೆಯ ನಿರ್ಧೇಶಕರ ಕಛೇರಿ ಸೇರಿದಂತೆ ನೂರಾರು ಜನ ಕೆಲಸಗಾರರು, ಕಾರ್ಮಿಕರು ಕೆಲಸ ಮಾಡುತ್ತಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಾಡಲು ವಾಹನ ನಿಷೇಧ ಮಾಡಲಾಗಿದೆ ಎಂದು ಸಹಾಯಕ ನಿರ್ದೇಶಕ ಕೃಷ್ಣಂ ರಾಜು ತಿಳಿಸಿದ್ದಾರೆ.

ದ್ವಿಪತದ ಪ್ರವೇಶ ದ್ವಾರದಿಂದ ವಾಹನಗಳಲ್ಲಿ ಬರುವ ಸಿಬ್ಬಂದಿ ಬಂಡೆ ಹತ್ತಿರ ವಾಹನಗಳನ್ನು ಪಾಕ್೯ ಮಾಡಿ ಒಳ ಹೋಗ ಬೇಕು.  ಪ್ರತಿ ದಿನ 250 ರಿಂದ 300 ವಾಹನಗಳು ನಿಲ್ಲುತ್ತವೆ. ಉಳಿದಂತೆ ಸಾರ್ವಜನಿಕರ ವಾಹನಗಳನ್ನು ಮರಿಗೌಡ ಹಾಲ್ ಬಳಿ ಇರೋ ನಿಲ್ದಾಣದಲ್ಲಿ ಮೊದಲಿನಂತೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.

ವಾಹನ ಸಂಚಾರ ನಿಷೇದ ನಂತರ ಮೂವತ್ತೈದು ಬೈಸಿಕಲ್ ಗಳನ್ನು  ತೋಟಗಾರಕೆ ಇಲಾಖೆ ಖರೀದಿ ಮಾಡಿ ಸಿಬ್ಬಂದಿಯ ಬಳಕೆಗೆ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos