ಆಡಂಬರದ ಹುಟ್ಟು ಹಬ್ಬ ಬೇಡವೆ ಬೇಡ

ಆಡಂಬರದ ಹುಟ್ಟು ಹಬ್ಬ ಬೇಡವೆ ಬೇಡ

ಬೆಂಗಳೂರು, ಜೂ. 20: ಆಡಂಬರವಿಲ್ಲದೇ ಸರಳವಾಗಿ ಹುಟ್ಟುಹಬ್ಬ ಆರಿಸಿಕೊಳ್ಳಲು ತೀರ್ಮಾನಿಸಿದ ಶಾಸಕ ಆರ್. ಮಂಜುನಾಥ್ ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರಿಗೆ ಹಾರ, ಶಾಲು, ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಹಣ ಪೋಲು ಮಾಡುವ ಬದಲು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಮನವಿ ಮಾಡಿ ಎಂದು ಮನವಿ ಮಾಡಿದ ಬೆನ್ನಲ್ಲೆ ಕಾರ್ಯಕರ್ತರು ವಿವಿದ ರೀತಿಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು.

ಹೌದು ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಇಂದು ತಮ್ಮ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿತ್ತು, ಆದರೆ ರಾಜ್ಯದಲ್ಲಿ ತೀವ್ರ ಬರಗಾಲ ಇರುವುದರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹಿಂದೆ ಸರಿದು ಕುಟುಂಬ ಸದಸ್ಯರ ಜೊತೆಯಲ್ಲಿ ಧರ್ಮಸ್ಥಳಕ್ಕೆ ತೆರಳಿದರು.

ಇನ್ನೂ ಕ್ಷೇತ್ರದ ಕಾರ್ಯಕರ್ತರು ಹಾಗೂ ಬೆಂಬಲಿಗರು ಇಂದು 8 ವಾರ್ಡ್ ಗಳು, 2 ಗ್ರಾಮಪಂಚಾಯ್ತಿಗಳಲ್ಲಿ ಹಲವು ರೀತಿಯ ಸಮಾಜಸೇವೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಹನುಮಂತರಾಜು ನೇತೃತ್ವದಲ್ಲಿ ನೂರಾರು ಗಿಡಗಳನ್ನು ನೆಟ್ಟರು, ಮಲ್ಲಸಂದ್ರ ಉದ್ಯಾನವನದಲ್ಲಿ ಸ್ವಚ್ಚತಾ ಕಾರ್ಯ ಮಾಡಿದರು, ಇನ್ನೂ ಆದ್ಯಾಪೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿನ ಅಧ್ಯಕ್ಷ ಕಿರಣ್ ನೇತೃತ್ವದಲ್ಲಿ ಸರ್ಕಾರಿ ಉರ್ದು ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ನೀಡುವುದರ ಜೊತೆಗೆ ಅಂಧರಿಗೆ 25 ಸಾವಿರ ರೂ. ಚಕ್ ನೀಡುವ ಮೂಲಕ ಧನಸಹಾಯ ಮಾಡಿದರು. ಅಲ್ಲದೇ ಪ್ರಧಾನ ಕಾರ್ಯದರ್ಶಿ ಜಗದೀಶ್ ನೇತೃತ್ವದಲ್ಲಿ ರಕ್ತಧಾನ ಶಿಬಿರದಲ್ಲಿ ನೂರಾರು ಕಾರ್ಯಕರ್ತರು ರಕ್ತದಾನ ಮಾಡಿ ಸರಳತೆ ಮೆರೆದರು.

ಫ್ರೆಶ್ ನ್ಯೂಸ್

Latest Posts

Featured Videos