ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ನಟ

ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ನಟ

ಮುಂಬೈ, ಡಿ. 27: ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್‍ನೋಟ್ ಬರೆದು ಬಾಲಿವುಡ್ ನಟ ಹಾಗೂ ಜೋರ್ ಕಾ ಜತ್ಕ ರಿಯಾಲಿಟಿ ಶೋ ವಿನ್ನರ್ ಕುಶಾಲ್ ಪಂಜಾಬಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಶಾಲ್ ಪಂಜಾಬಿ ತಮ್ಮ ಮುಂಬೈ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ಮುಂಬೈನ ಬಾಬಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಕುಶಾಲ್ ಪಂಜಾಬಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕುಶಾಲ್ ಪಂಜಾಬಿ ಅವರ ನಿವಾಸದಲ್ಲಿ ಪೊಲೀಸರಿಗೆ ಒಂದೂವರೆ ಪುಟದ ಡೆತ್‍ನೋಟ್ ಸಿಕ್ಕಿದ್ದು, ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದುಕೊಂಡಿದ್ದಾರೆ.

ಕುಶಾಲ್ ಪಂಜಾಬಿ ಅವರು, ಇಂಗ್ಲಿಷ್ ನಲ್ಲಿ ಒಂದೂವರೆ ಪುಟದ ಡೆತ್‍ನೋಟ್ ಬರೆದಿದ್ದು, ಆದರಲ್ಲಿ ತನ್ನ ಆಸ್ತಿಯ ಶೇ.50 ರಷ್ಟು ಭಾಗ ತನ್ನ ತಂದೆ-ತಾಯಿ ಮತ್ತು ಸಹೋದರಿಯರಿಗೆ ಹಂಚಿಕೆಯಾಗಬೇಕು ಮತ್ತು ಉಳಿದ ಶೇ.50 ರಷ್ಟು ಆಸ್ತಿ ನನ್ನ ಮೂರು ವರ್ಷದ ಮಗ ಕಿಯಾನ್‍ಗೆ ಸೇರಬೇಕು ಎಂದು ಬರೆದಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos