ಮತ್ತೊಬ್ಬ ಯುವತಿಯೊಂದಿಗೆ ಸಲ್ಲಾಪ: ಪತಿಗೆ ಆ್ಯಸಿಡ್‌ ಎರಚಿದ ಪತ್ನಿ!

ಮತ್ತೊಬ್ಬ ಯುವತಿಯೊಂದಿಗೆ ಸಲ್ಲಾಪ: ಪತಿಗೆ ಆ್ಯಸಿಡ್‌ ಎರಚಿದ ಪತ್ನಿ!

ಬೆಂಗಳೂರು, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಪತಿ‌ ಮೇಲೆ ಪತ್ನಿಯೇ ಆಯಸಿಡ್ ದಾಳಿ ನಡೆಸಿರುವ ಘಟನೆ ತಿಲಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಏಪ್ರಿಲ್ 26 ರಂದು ಘಟನೆ ಘಟನೆ ನಡೆದಿದ್ದು, ಮೊಹಮದ್ ಅತೀಮ್ ಎಂಬುವರ ಮುಖಕ್ಕೆ ಆತನ ಪತ್ನಿ ಅಕ್ಸಾಪರ್ವಿನ್ ಆಯಸಿಡ್​ ಎರಚಿದ್ದಾರೆ. ಅತೀಮ್-ಅಕ್ಸಾಪರ್ವಿನ್ 2006 ಆಗಸ್ಟ್​ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಅತೀಮ್‌ ಮತ್ತು ಅಕ್ಸಾ ಪರ್ವೀನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಸ್ಪರ ಪ್ರೀತಿಸಿದ್ದರು. ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದು 2006ರಲ್ಲಿ ವಿವಾಹವಾಗಿದ್ದರು. ಮೊಹಮ್ಮದ್‌ನ ಮೂಲ ಹೆಸರು ಶಾಂತರಾಜು ಆಗಿದ್ದು, ಪರ್ವೀನ್ ಳನ್ನು ವಿವಾಹವಾಗುವ ಸಂದರ್ಭದಲ್ಲಿ ಹೆಸರು ಬದಲಾಯಿಸಿಕೊಂಡಿದ್ದ. ಮೊಹಮ್ಮದ್‌ ಎಂಬ ಹೆಸರಿನಲ್ಲಿ ವಿವಾಹವನ್ನು ಕೂಡ ನೋಂದಾಯಿಸಿಕೊಂಡಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಾರಂಭದಲ್ಲಿ ದಂಪತಿ ಅನೋನ್ಯವಾಗಿಯೇ ಇದ್ದರು. ಶಾಂತರಾಜು ಬೇರೊಬ್ಬ ಯುವತಿ ಜತೆ ಹೆಚ್ಚು ಒಡನಾಟ ಹೊಂದಿದ್ದು, ಮೊಬೈಲ್‌ ಸಂಭಾಷಣೆಯಲ್ಲಿ ತೊಡಗಿರುತ್ತಿದ್ದ. ಈ ಬಗ್ಗೆ ಪರ್ವೀನ್ ಪತಿಯನ್ನು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಹಲವು ಬಾರಿ ದಂಪತಿ ನಡುವೆ ಜಗಳ ನಡೆದು, ವಿಕೋಪಕ್ಕೆ ಹೋಗಿತ್ತು. ಇಬ್ಬರು ಅನೋನ್ಯವಾಗಿರಲು ಸಾಧ್ಯವಿಲ್ಲ ಎಂದಾಗ ವಿಚ್ಛೇದನ ಪಡೆಯಲು ನಿರ್ಧರಿಸಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದು ವರ್ಷದ ಹಿಂದೆ ಅತೀಮ್ ಪತ್ನಿಗೆ ತಲಾಖ್ ನೀಡಿದ್ದ. ಇನ್ನು ತಲಾಖ್ ನೀಡಿದ್ರೂ ಅತೀಮ್​ ಆಗಾಗ ಮಕ್ಕಳನ್ನ ನೋಡಲು ಪರ್ವಿನ್ ಮನೆಗೆ ಬರುತ್ತಿದ್ದ. ಹೀಗೆ ಕಳೆದ 26 ರಂದು ಮಕ್ಕಳನ್ನು ನೋಡಲು ಅಕ್ಸಾಪರ್ವಿನ್​ ಮನೆಗೆ ಬಂದಿದ್ದ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ದಂಪತಿ ಕೆಲ ವರ್ಷ ಒಟ್ಟಿಗೆ ಇರಲು ನಿರ್ಧರಿಸಿದ್ದರು. ನಂತರ ಬೇರೊಂದು ಮದುವೆಯಾಗಲು ಯೋಚಿಸಿ, ಮ್ಯಾಟ್ರಿಮೊನಿಯಲ್ಲಿ ಪ್ರೋಫೈಲ್​​ ಫೊಸ್ಟ್ ಮಾಡಿದ್ದ ಶಾಂತರಾಜು ಬೇರೊಬ್ಬ ಯುವತಿ ಒಡನಾಟ ಇಟ್ಟುಕೊಂಡಿದ್ದನ್ನು ಬಿಟ್ಟಿರಲಿಲ್ಲ. ಇದೇ ವಿಚಾರಕ್ಕೆ ಏ.24 ರಂದು ಇಬ್ಬರ ನಡುವೆ ಜಗಳ ನಡೆದಿದೆ. ಈ ವಿಚಾರ ತಿಳಿದ ಪತ್ನಿ ಅಕ್ಸಾಪರ್ವಿನ್ ಕೋಪಗೊಂಡಿದ್ದಳು. ಈ ವೇಳೆ ಅತೀಮ್​ಗೆ ಮ್ಯಾಟ್ರಿಮೋನಿಯಿಂದ ಯುವತಿಯ ಕರೆ ಬಂದಿದೆ. ಈ ವಿಚಾರವಾಗಿ ಅತೀಮ್ ಹಾಗೂ ಅಕ್ಸಾಪರ್ವಿನ್ ನಡುವೆ ಜಗಳವಾಗಿದೆ. ಬಳಿಕ ಆಕೆ ಮನೆಯಲ್ಲೇ ಊಟ ಮಾಡಿದ ಪತಿ ನಿದ್ರೆಗೆ ಜಾರುತ್ತಾನೆ. ಈ ವೇಳೆ ಅಕ್ಸಾಪರ್ವಿನ್​ ಅತೀಮ್​ ಮುಖಕ್ಕೆ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆಯಸಿಡ್ ಎರಚಿದ್ದಾಳೆ. ಪರಿಣಾಮ ಅತೀಮ್ ಹಣೆ ಹಾಗೂ ಮುಖದ ಭಾಗಕ್ಕೆ ಸುಟ್ಟಗಾಯವಾಗಿದೆ. ಬಳಿಕ ಆತನನ್ನ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಆ್ಯಸಿಡ್‌ ಶಾಂತರಾಜುವಿನ ಹಣೆಗೆ ಮಾತ್ರ ತಗುಲಿ ಸಣ್ಣಪುಟ್ಟಗಾಯಗಳಿಂದ ಪಾರಾಗಿದ್ದಾನೆ. ಪ್ರಕರಣ ಸಂಬಂಧ ತಿಲಕ್ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಕ್ಸಾಪರ್ವಿನ್​ರನ್ನ ಬಂಧಿಸಲಾಗಿದೆ. ಪತಿ ಕೊಟ್ಟದೂರಿನ ಮೇರೆಗೆ ಪತ್ನಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos