ಮನೆಗೆ ನುಗ್ಗಿದ ಲಾರಿ: 2 ಸಾವು

ಮನೆಗೆ ನುಗ್ಗಿದ ಲಾರಿ: 2 ಸಾವು

ಹೊಸಕೋಟೆ, ಏ. 13, ನ್ಯೂಸ್ ಎಕ್ಸ್ ಪ್ರೆಸ್: ಲಾರಿಯೊಂದು ಒಂದು  ರೊಡಿನ ಪಕ್ಕದಲ್ಲಿದ್ದ ಮನೆಗೆ ನುಗ್ಗಿದ ಪರಿನಾಮ ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ಇಂದು ಬೋಧನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ 207ರ ಚಿಕ್ಕತಿರುಪತಿ ಕಡೆಯಿಂದ ಬೆಂಗಳೂರಿಗೆ ಎಮ್ ಸ್ಯಾಂಡ್ ಡಸ್ಟ್ ತುಂಬಿದ್ದ ಟಿಪ್ಪರ್ ಲಾರಿ ಮನೆಗೆ ನುಗ್ಗಿದ ಪರಿಣಾಮ 26 ವರ್ಷದ ರಘು, 45 ವರ್ಷದ ಮಂಜುನಾಥ್ ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿದ್ದ ಮನೆಗೆ ನುಗ್ಗಿದೆ. ಈ ವೇಳೆ ಮನೆಯ ಛಾವಣಿ ಸಂಪೂರ್ಣ ಕುಸಿತವಾಗಿದ್ದು, ಮನೆ ಕುಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅವಶೇಷಗಳ ಅಡಿ ಸಿಲುಕಿದ್ದ ಮೃತದೇಹಗಳನ್ನು ಕ್ರೇನ್ ಸಹಾಯದಿಂದ ತೆರವು ಕಾರ್ಯಾಚರಣೆ ಮಾಡಲಾಗಿದೆ. ಸ್ಥಳಕ್ಕೆ ತಿರುಮಲ ಶೆಟ್ಟಿಹಳ್ಳಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos